ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಯುಎಸ್ ಸರ್ಕಾರವು ಭಾರತೀಯರಿಗೆ ಸಿಹಿ ಸುದ್ದಿಯನ್ನ ನೀಡಿದೆ. ಸತತ ಏಳು ವರ್ಷಗಳಿಂದ ಎಚ್-1ಬಿ ವೀಸಾದಲ್ಲಿ ಕೆಲಸ ಮಾಡುತ್ತಿರುವವರಿಗೆ ಗ್ರೀನ್ ಕಾರ್ಡ್ ನೀಡುವ ಕಾನೂನಿಗೆ ತಿದ್ದುಪಡಿ ತರುವ ಮಸೂದೆಯನ್ನ ಸೆನೆಟ್‍ನಲ್ಲಿ ಮಂಡಿಸಲಾಗಿದೆ. ಈ ಉದ್ದೇಶಕ್ಕಾಗಿ ವಲಸೆ ಕಾಯ್ದೆಯಲ್ಲಿ ತಿದ್ದುಪಡಿಗಳನ್ನ ಮಾಡಲಾಗಿದೆ.

ಕೆಲವು ವರ್ಗಗಳಲ್ಲಿ ಕೆಲಸ ಮಾಡುವ ಭಾರತೀಯ ಟೆಕ್ ವೃತ್ತಿಪರರಿಗೆ ಅನುಕೂಲವಾಗುವಂತೆ ನಿಯಮಗಳನ್ನ ತಿದ್ದುಪಡಿ ಮಾಡಲು ಯುಎಸ್ ಸೆನೆಟ್‍ನಲ್ಲಿ ಮಸೂದೆಯನ್ನ ಮಂಡಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಯುಎಸ್‍ನಲ್ಲಿ ಸತತ ಏಳು ವರ್ಷಗಳ ಕಾಲ ಕೆಲಸ ಮಾಡುವವರು ಗ್ರೀನ್ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ.

ಈ ಮಸೂದೆಯನ್ನ ಸೆನೆಟರ್ ಅಲೆಕ್ಸ್ ಪಡಿಲ್ಲಾ ಅವ್ರು ಪ್ರಸ್ತಾಪಿಸಿದರು ಮತ್ತು ಇತರ ಸೆನೆಟರ್’ಗಳಾದ ಎಲಿಜಬೆತ್ ವಾರೆನ್, ಬೆನ್ ರಾಯ್ ಲುಜೋನ್ ಮತ್ತು ಡಿಕ್ ಡರ್ಬಿನ್ ಅವರು ಬೆಂಬಲಿಸಿದರು. ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‍’ನಲ್ಲಿ ಈ ಮಸೂದೆಯನ್ನ ಕಾಂಗ್ರೆಸ್ ಸದಸ್ಯೆ ಜೋ ಲೋಫ್ಗ್ರೆನ್ ಮಂಡಿಸಿದರು.

ಮಸೂದೆಯು ಕಾನೂನಾಗಿ ಮಾರ್ಪಟ್ಟರೆ, ಇದು ಪ್ರಸ್ತುತ ಎಚ್ -1 ಬಿ ವೀಸಾಗಳಲ್ಲಿ ಕೆಲಸ ಮಾಡುತ್ತಿರುವವರು ಸೇರಿದಂತೆ 80 ಲಕ್ಷ ಜನರಿಗೆ ಪ್ರಯೋಜನವನ್ನ ನೀಡುತ್ತದೆ. ಇದರಲ್ಲಿ ಎಚ್-1ಬಿ ವೀಸಾ ಹೊಂದಿರುವವರು, ದೀರ್ಘಕಾಲೀನ ವೀಸಾ ಹೊಂದಿರುವವರ ಮಕ್ಕಳು, ಗ್ರೀನ್ ಕಾರ್ಡ್ ಕನಸುಗಾರರು ಮತ್ತು ಇತರರು ಸೇರಿದ್ದಾರೆ.

Share.
Exit mobile version