ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸ್ಮಾರ್ಟ್ ಫೋನ್ ಹೊಂದಿರುವ ಪ್ರತಿಯೊಬ್ಬರ ಮೊಬೈಲ್’ನಲ್ಲೂ ವಾಟ್ಸಾಪ್ ಇದ್ದೇ ಇರುತ್ತೆ. ಸದ್ಯ ವಾಟ್ಸಾಪ್ ಇಲ್ಲದೇ ಸ್ಮಾರ್ಟ್ ಫೋನ್ ಇಲ್ಲ ಅನ್ಬೋದು. ಸಧ್ಯ ರೈಲ್ವೇ ಇಲಾಖೆ ವಾಟ್ಸಾಪ್ ಬಳಸುತ್ತಿರುವ ಎಲ್ಲರಿಗೂ ಗುಡ್ ನ್ಯೂಸ್ ನೀಡಿದೆ. ರೈಲಿನಲ್ಲಿ ಪ್ರಯಾಣಿಸುವಾಗ ಆಹಾರವನ್ನ ಆರ್ಡರ್ ಮಾಡುವುದನ್ನ ಇದು ಸುಲಭಗೊಳಿಸಿದೆ. ಹೌದು, ಭಾರತೀಯ ರೈಲ್ವೇ ವಾಟ್ಸಾಪ್ ಮೂಲಕ ಈ ರೀತಿಯ ಪ್ರಯೋಜನವನ್ನ ನೀಡುತ್ತಿದೆ.
ನೀವು ಬುಕ್ ಮಾಡಿದ ಟಿಕೆಟ್ನ PNR ಸಂಖ್ಯೆಯ ಮೂಲಕ ನೀವು ವಾಟ್ಸಾಪ್ನಲ್ಲಿ ಆಹಾರದ ಆರ್ಡರ್ ಮಾಡಬಹುದು. ನಿಮ್ಮ ನೆಚ್ಚಿನ ಆಹಾರವನ್ನ ನೀವು ಆನ್ಲೈನ್ನಲ್ಲಿ ಆರ್ಡರ್ ಮಾಡಬಹುದು ಮತ್ತು ತಿನ್ನಬಹುದು. ಭಾರತೀಯ ರೈಲ್ವೇ ತನ್ನ ಇ-ಕೇಟರಿಂಗ್ ಸೇವೆಗಳನ್ನ ಗ್ರಾಹಕರಿಗೆ ಹೆಚ್ಚು ಸುಲಭವಾಗಿಸುವ ಭಾಗವಾಗಿ ಈ ಹೊಸ ಸೇವೆಯನ್ನು ಪ್ರಾರಂಭಿಸಿದೆ.
ಹಾಗಂತ ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಇ-ಟಿಕೆಟ್ ಬುಕ್ ಮಾಡಿದ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಲಭ್ಯ. ಇದಕ್ಕಾಗಿ ರೈಲ್ವೇ ವ್ಯವಹಾರ ವಾಟ್ಸಾಪ್ ಸಂಖ್ಯೆ +91-8750001323 ಅನ್ನು ಪ್ರಾರಂಭಿಸಿದೆ. ಭಾರತೀಯ ರೈಲ್ವೆಯ PSU, ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಸೋಮವಾರ ತನ್ನ ಇ-ಕೇಟರಿಂಗ್ ಸೇವೆಗಳನ್ನ ಪ್ರಾರಂಭಿಸಿತು.
ಇದಕ್ಕಾಗಿ ಗ್ರಾಹಕರು ಯಾವುದೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕಾಗಿಲ್ಲ.. IRCTC ಇ-ಕ್ಯಾಟರಿಂಗ್ ವೆಬ್ಸೈಟ್ www.ecatering.irctc.co.in ಮೂಲಕ ಅವರು ನಿಲ್ದಾಣಗಳ ಬಳಿ ತಮ್ಮ ಆಯ್ಕೆಯ ರೆಸ್ಟೋರೆಂಟ್ನಿಂದ ಆಹಾರ ಆರ್ಡರ್ ಮಾಡಬಹುದು. ಪ್ರಸ್ತುತ, ಗ್ರಾಹಕರ ಪ್ರತಿಕ್ರಿಯೆ ಮತ್ತು ಸಲಹೆಗಳ ಪ್ರಕಾರ, ಈ ವಾಟ್ಸಾಪ್ ಆಹಾರ ವಿತರಣಾ ಸೌಲಭ್ಯವು ಕೆಲವು ಆಯ್ದ ರೈಲುಗಳಲ್ಲಿ ಮಾತ್ರ ಲಭ್ಯವಿದೆ ಎಂದು ಭಾರತೀಯ ರೈಲ್ವೆ ಸ್ಪಷ್ಟಪಡಿಸಿದೆ. ಮುಂದಿನ ಹಂತದಲ್ಲಿ ಹೆಚ್ಚಿನ ರೈಲುಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ.
ಅಂದ್ಹಾಗೆ, ಐಆರ್ಸಿಟಿಸಿಯ ಇ-ಕೇಟರಿಂಗ್ ಸೇವೆಗಳ ಮೂಲಕ ದಿನಕ್ಕೆ ಸುಮಾರು 50,000 ಊಟಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ ಎಂದು ರೈಲ್ವೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ವರ್ಷ, ಆನ್ಲೈನ್ ಪ್ಲಾಟ್ಫಾರ್ಮ್ ಝೂಪ್ ಇಂಡಿಯಾ ರೈಲು ಪ್ರಯಾಣಿಕರಿಗೆ ಆಹಾರವನ್ನು ತಲುಪಿಸಲು ವಾಟ್ಸಾಪ್ ಚಾಟ್ಬಾಟ್ ಪರಿಹಾರಗಳ ಪೂರೈಕೆದಾರ ಹ್ಯಾಪ್ಟಿಕ್ ಟೆಕ್ನಾಲಜೀಸ್ ಲಿಮಿಟೆಡ್ನೊಂದಿಗೆ ಪಾಲುದಾರಿಕೆ ಹೊಂದಿತ್ತು.
OMG : ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ನಲ್ಲಿ ಬೈಕ್ ಸವಾರನ ಹುಚ್ಚಾಟ : ಮೈ ಜುಂ ಎನಿಸುವ ವಿಡಿಯೋ ವೈರಲ್ |VIDEO
BIGG NEWS : ಫೆ.10 ರಂದು ಗದಗದ ಐತಿಹಾಸಿಕ ‘ಲಕ್ಕುಂಡಿ ಉತ್ಸವ’ಕ್ಕೆ ಸಿಎಂ ಬೊಮ್ಮಾಯಿ ಚಾಲನೆ