ಬೆಂಗಳೂರು: ಅನುದಾನಿತ ಪದವಿ ಕಾಲೇಜುಗಳಲ್ಲಿ ( Aided Degree College ) ಸಹಾಯಕ ಪ್ರಾಧ್ಯಾಪಕರ ಹುದ್ದೆ ( Post of Assistant Professor )ಗಳ ನೇಮಕಾತಿಯಲ್ಲಿ 2 ವರ್ಷ ವಯೋಮಿತಿಯನ್ನು ಸಡಿಲಿಕೆ ( Age Relaxation ) ಮಾಡಲಾಗಿದೆ. ಈ ಮೂಲಕ ಈ ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ.
ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಅನುದಾನಿತ ಪದವಿ ಕಾಲೇಜುಗಳ ಸಹಾಯ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಯಲ್ಲಿ ಎರಡು ವರ್ಷಗಳ ಕಾಲ ವಯೋಮಿತಿ ಸಡಿಲಿಕೆ ಮಾಡಿರುವುದಾಗಿ ತಿಳಿಸಿದೆ. ಹೀಗಾಗಿ ವಯೋಮಿತಿ ಮೀರಿದೆ ಎಂದು ನಿರಾಸೆಯಲ್ಲಿದ್ದಂತ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ.
ಅಂದಹಾಗೆ ಹಾಲಿ ನಿಯಮದ ಪ್ರಕಾರ ಸಾಮಾನ್ಯ ಅಭ್ಯರ್ಥಿಗಳಿಗೆ 40 ವರ್ಷ. ಪ್ರವರ್ಗ 2ಎ, 2ಬಿ, 3ಬಿ ಅಭ್ಯರ್ಥಿಗಳಿಗೆ 43 ವರ್ಷ. ಎಸ್ಸಿ, ಎಸ್ಟಿ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 45 ವರ್ಷದವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದಲ್ಲದೇ ಸರ್ಕಾರಿ ಸೇವೆ, ಅಂಗವಿಕಲರಿಗೆ ವಯೋಮಿತಿ ಸಡಿಲಿಕೆ ಇದೆ. ಇದಲ್ಲದೇ ಈಗ 2 ವರ್ಷಗಳ ವಯೋಮಿತಿಯನ್ನು ಸಡಿಲಿಕೆ ಮಾಡಲಾಗಿದೆ.
ಕೊರೋನಾ ವೇಳೆ ಯಾವುದೇ ನೇಮಕಾತಿಗಳು ನಡೆಯದೇ ಇರುವುದರಿಂದ ಆ ಎರಡು ವರ್ಷಗಳನ್ನು ಅಭ್ಯರ್ಥಿಗಳ ಮನವಿ ಮೇರೆಗೆ ವಯೋಮಿತಿಯಲ್ಲಿ ಸಡಿಲಿಕೆ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ ಎಂಬುದಾಗಿ ತಿಳಿದು ಬಂದಿದೆ.
ನಾಳೆಯಿಂದ ‘2,000 ರೂ ನೋಟು’ಗಳ ವಿನಿಮಯ ಆರಂಭ: ಶುಲ್ಕವಿಲ್ಲ, ಐಡಿ ಕಾರ್ಡ್ ಕೂಡ ಬೇಕಿಲ್ಲ