ವರದಿ: ವಸಂತ ಬಿ ಈಶ್ವರಗೆರೆ

ಬೆಂಗಳೂರು: ಮಾನ್ಸೂನ್ ಮಳೆಯ ಈ ಸಂದರ್ಭದಲ್ಲಿ ಜೋಗದ ಜಲಪಾತ ( Jog Falls ) ಮೈದುಂಬಿದೆ. ಈ ಪರಿಣಾಮ ಹಾಲ್ ಜೇನ್ ತೊರೆಯಾಗಿ ಕಣ್ ಮನ ಸೆಳೆಯುವಂತೆ ಕಂಗೊಳಿಸುತ್ತಿದೆ. ಇಂತಹ ಜೋಗದ ಜಲಪಾತದ ಸೌಂದರ್ಯವನ್ನು ಸವಿಯೋ ನಿರೀಕ್ಷೆಯಲ್ಲಿದ್ದವರಿಗೆ, ಇದೀಗ ಕೆ ಎಸ್ ಆರ್ ಟಿಸಿಯಿಂದ ಪ್ಯಾಕೇಜ್ ಟೂರ್ ( KSRTC Package Tour ) ಘೋಷಣೆ ಮಾಡಿ, ಗುಡ್ ನ್ಯೂಸ್ ನೀಡಿದೆ.

BREAKING NEWS: ಮುಂದೂಡಿಕೆಯಾಗಿದ್ದ ಹ್ಯಾಂಗ್ಜೌ ಏಷ್ಯನ್ ಗೇಮ್ಸ್ ಸೆ.23, 2023ರಿಂದ ಆರಂಭ | Hangzhou Asian Games

ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾರ್ವಜನಿಕ ಪ್ರಾಯಣಿಕರ ಅನುಕೂಲಕ್ಕಾಗಿ ಬೆಂಗಳೂರು- ಜೋಗ ಜಲಪಾತ ವಯಾ ಶಿವಮೊಗ್ಗ, ಸಾಗರ ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ಬಸ್ ನೊಂದಿಗೆ ವಾರಾಂತ್ಯದ ದಿನಗಳಲ್ಲಿ ಅಂದ್ರೆ ಶುಕ್ರವಾರ ಮತ್ತು ಶನಿವಾರ ಪ್ಯಾಕೇಜ್ ಟೂರ್ ಅನ್ನು ದಿನಾಂಕ 22-07-2022 ರಿಂದ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದೆ.

ಹೀಗಿದೆ ಬೆಂಗಳೂರು –ಜೋಗ ಜಲಪಾತ ಪ್ಯಾಕೇಜ್ ಟೂರ್ ವೇಳಾಪಟ್ಟಿ

Share.
Exit mobile version