ಬೆಂಗಳೂರು : ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದ್ದು, ಬರೋಬ್ಬರಿ 1,17,646 ಕಾರ್ಡ್ ಗಳ ತಿದ್ದುಪಡಿಗೆ ಅನುಮತಿ ನೀಡಿದೆ.

ರೇಷನ್ ಕಾರ್ಡ್ ಗಳಲ್ಲಿನ ಹೆಸರು ಸೇರ್ಪಡೆ/ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದ ಸುಮಾರು 3.18 ಲಕ್ಷ ಫಲಾನುಭವಿಗಳ ಪೈಕಿ 1,17,646 ಕಾರ್ಡ್ ಗಳ ತಿದ್ದುಪಡಿಗೆ ಆಹಾರ ಇಲಾಖೆ ಸಮ್ಮತಿ ನೀಡಿದೆ. 1 ತಿಂಗಳಲ್ಲಿ 53,219 ಹೊಸ ತಿದ್ದುಪಡಿಗೆ ಫಲಾನುಭವಿಗಳಿಂದ ಅರ್ಜಿ ಸಲ್ಲಿಸಲಾಗಿತ್ತು. 3.70 ಲಕ್ಷ ಅರ್ಜಿಗಳ ಪೈಕಿ 93,362 ಬಿಪಿಎಲ್ ಕಾರ್ಡ್​ಗಳು ತಿರಸ್ಕೃತಗೊಂಡಿವೆ.

ಇಲಾಖೆ ನಿಯಮಾವಳಿ ಮೀರಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದವರಿಗೆ ಆಹಾರ ಇಲಾಖೆ ಶಾಕ್ ನೀಡಿದ್ದು, ಹೆಸರು ಬದಲಾವಣೆ, ಹೊಸದಾಗಿ ಹೆಸರು ಸೇರಿಸಲು ಮಾತ್ರ ಅವಕಾಶವಿತ್ತು. 3.70 ಲಕ್ಷ ಅರ್ಜಿಗಳನ್ನು ಪರಿಶೀಲಿಸಿದ್ದ ಆಹಾರ ಇಲಾಖೆ ಅಧಿಕಾರಿಗಳು
3.70 ಲಕ್ಷ ಅರ್ಜಿಗಳ ಪೈಕಿ 1,17,646 ಅರ್ಜಿಗಳ ತಿದ್ದುಪಡಿಗೆ ಅನುಮತಿ ನೀಡಿದೆ.

Share.
Exit mobile version