ಬೆಂಗಳೂರು : ಮನೆ ಬಾಗಿಲಿಗೆ ನೇತ್ರ ತಪಾಸಣೆ ಸೇವೆ ತಲುಪಿಸುವ ಹಾಗೂ ಸಾರ್ವಜನಿಕರಿಗೆ ಉಚಿತ ಕನ್ನಡಕವನ್ನು ವಿತರಣೆ ಮಾಡುವ ಸಲುವಾಗಿ ಜಾರಿಗೆ ತಂದಿರುವ “ಆಶಾಕಿರಣ” ಯೋಜನೆಗೆ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಚಾಲನೆ ನೀಡಿದ್ದಾರೆ. 

ಆರೋಗ್ಯ ಇಲಾಖೆಯು ಹೊಸ ಡಿಜಿಟಲ್ ಆರೋಗ್ಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಮಗ್ರ ಕಣ್ಣಿನ ಆರೈಕೆ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಸಿ-ಕ್ಯಾಂಪ್ ಮತ್ತು ಆಕ್ಟ್ ಫಾರ್ ಹೆಲ್ತ್ ನೊಂದಿಗೆ ಇಲಾಖೆ ಜತೆಯಾಗಿದೆ. ಈ ಯೋಜನೆಯನ್ನು ರಾಜ್ಯ ಸಾರಿಗೆ ಇಲಾಖೆಯ ಎಲ್ಲ ಸಿಬ್ಬಂದಿಗೂ ವಿಸ್ತರಿಸಲಾಗುತ್ತಿದೆ.

ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಮತ್ತು ಬಸ್ ಡಿಪೋಗಳಲ್ಲಿ ಕಣ್ಣಿನ ವಕ್ರೀಕಾರಕ ದೋಷಗಳು ಮತ್ತು ರೆಟಿನೋಪತಿಗಳಂತಹ ಸಮಸ್ಯೆಗಳಿಗೆ ಉಚಿತ ನೇತ್ರ ತಪಾಸಣೆ ನಡೆಸಲು ಸಜ್ಜುಗೊಳಿಸಲಾಗುತ್ತಿದೆ.

ಸಿ-ಕ್ಯಾಂಪ್ ನಿರ್ದೇಶಕ ಡಾ.ತಸ್ಲೀಮಾರೀಫ್ ಸೆಯ್ಯದ್, ಆಕ್ಟ್ ಸಂಸ್ಥೆಯ ಸದಸ್ಯ ಸಂದೀಪ್ ಸಿಂಘಲ್, ಕ್ರಿಶಾ ಮಾಥುರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share.
Exit mobile version