ನವದೆಹಲಿ: ನಿಮ್ಮ ಪಿಎಫ್ ಖಾತೆಯಲ್ಲಿ ಠೇವಣಿ ಇಡುವ ಮೊತ್ತದ ಮೇಲಿನ ತೆರಿಗೆ ಕುರಿತು ಕೇಂದ್ರ ಸರ್ಕಾರ ಈ ವರ್ಷದ ಬಜೆಟ್ ನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಕಳೆದ ವರ್ಷ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಿಎಫ್ ಖಾತೆಯಲ್ಲಿ 2.5 ಲಕ್ಷ ರೂ.ಗಿಂತ ಹೆಚ್ಚು ಠೇವಣಿ ಇಟ್ಟರೆ ಅದಕ್ಕೆ ಬಡ್ಡಿ ಕಟ್ಟಬೇಕಾಗುತ್ತದೆ ಎಂದು ಘೋಷಿಸಿದ್ದರು. ಈಗ ಮತ್ತೆ ಸರ್ಕಾರಿ ನೌಕರರು ಮತ್ತು ಕಂಪನಿಯಿಂದ ಖಾತೆಗೆ ಜಮಾ ಆಗದವರಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ರಿಯಾಯಿತಿ ಸಿಗುತ್ತದೆ ಎನ್ನಲಾಗುತ್ತಿದೆ.
ಆಂಗ್ಲ ಪತ್ರಿಕೆಯೊಂದರ ಪ್ರಕಾರ, ಈ ವರ್ಷದ ಬಜೆಟ್‌ನಲ್ಲಿ ಪಿಎಫ್ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸುವ ಸಾಧ್ಯತೆಯಿದೆಯಂತೆ. ಪಿಎಫ್ ಖಾತೆಯಲ್ಲಿ 5 ಲಕ್ಷದವರೆಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಮತ್ತು ಇದು ಎಲ್ಲಾ ಕಾರ್ಮಿಕ ವರ್ಗಗಳನ್ನು ಒಳಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದೇ ವೇಳೆ ಇಂತಹ ನಿರ್ಧಾರವನ್ನು ಕೇಂದ್ರವು ತೆಗೆದುಕೊಂಡರೆ, ಪಿಎಫ್ ಖಾತೆಗೆ ವಾರ್ಷಿಕ 5 ಲಕ್ಷದವರೆಗೆ ಜಮಾ ಮಾಡಿದರೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಮತ್ತು ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಉದ್ಯೋಗಿಗಳೂ ಇರಬಹುದು ಅಂಥ ತಿಳಿಸಿದೆ. ಕಳೆದ ವರ್ಷ, ಸರ್ಕಾರವು ಜನರಲ್ ಪಿಎಫ್‌ಗೆ ತೆರಿಗೆ ಮುಕ್ತ ಸಾಮರ್ಥ್ಯವನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿತ್ತು. ಸಾಮಾನ್ಯವಾಗಿ ಪಿಎಫ್ ಖಾತೆಯಲ್ಲಿರುವ ಮೊತ್ತವನ್ನು ಕಂಪನಿಯು ಪಾವತಿಸುವುದಿಲ್ಲ ಮತ್ತು ಉದ್ಯೋಗಿಯ ಹಣವನ್ನು ಅದರಲ್ಲಿ ಠೇವಣಿ ಮಾಡಲಾಗುತ್ತದೆ.
ಮುಟ್ಟು ಸರಿಯಾಗಿ ಆಗುತ್ತಿಲ್ಲವೇ ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ, ಆಗ ನಿಮ್ಮ ಋತುಚಕ್ರ ಸರಿಯಾಗುತ್ತದೆ.