ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಬಡ್ತಿ, ಮುಂಬಡ್ತಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿತ್ತು. ದಿನಾಂಕ 31-12-2022ರೊಳಗೆ ಪರೀಕ್ಷೆ ತೇರ್ಗಡೆಗೆ ಸೂಚಿಸಲಾಗಿತ್ತು. ಈ ದಿನಾಂಕವನ್ನು 31-12-2023ರವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಬಗ್ಗೆ ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಕರ್ನಾಟಕ ನಾಗರೀಕ ಸೇವಾ ( ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ) ( ತಿದ್ದುಪಡಿ) ನಿಯಮಗಳು 2023ರ ಕರಡು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಈ ಮೊದಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಮುಕ್ತಾಯಗೊಳಿಸಲು ದಿನಾಂಕ 31-12-2022 ಎಂಬುದಾಗಿ ಸೂಚಿಸಲಾಗಿತ್ತು. ಇದನ್ನು ದಿನಾಂಕ 31-12-2023ರೊಳಗೆ ವಿಸ್ತರಿಸಿರೋದಾಗಿ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಬಡ್ತಿ, ಮುಂಬಡ್ತಿಗೆ ಕಡ್ಡಾಯಗೊಳಿಸಿರುವಂತ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ದಿನಾಂಕ 31-12-2023ರೊಳಗೆ ಮುಕ್ತಾಗೊಳಿಸೋದು ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ಸರ್ಕಾರಿ ನೌಕರರಿಗೆ ಬಿಗ್ ರಿಲೀಫ್ ಜೊತೆಗೆ, ಗುಡ್ ನ್ಯೂಸ್ ನೀಡಲಾಗಿದೆ.