ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ( Karnataka Government Employees ) ನಿವೃತ್ತಿ ವಯಸ್ಸಿಗೆ ಅನುಗುಣವಾಗಿ ನೌಕರರಿಗೆ ನೀಡಲಾಗುತ್ತಿರುವತ ಜೀವ ವಿಮಾ ಪಾಲಿಸಿಗಳ ( Life Insurance Policy ) ಪೂರೈಕೆ ಅವಧಿಯನ್ನು ಹೆಚ್ಚಳ ಮಾಡಿ, ಸರ್ಕಾರ ಆದೇಶಿಸಿದೆ.

ಮನೆ ನಿರೀಕ್ಷೆಯಲ್ಲಿದ್ದ ಜನರಿಗೆ ಗುಡ್ ನ್ಯೂಸ್: ‘ಬೆಂಗಳೂರು ಅಮೃತೋತ್ಸವ ಮನೆ’ ಯೋಜನೆಗೆ ಅರ್ಜಿ ಆಹ್ವಾನ

ಈ ಕುರಿತಂತೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಈ ಆದೇಶದ ಪ್ರತಿ ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದ್ದು, ವಿಮಾ ಇಲಾಖೆಯು ಜೀವ ವಿಮೆ ಸೌಲಭ್ಯವನ್ನು ( KGID Policy ) ಸಾರ್ವಜನಿಕರಿಗೆ ಮತ್ತು ಸರ್ಕಾರಿ ನೌಕರರಿಗೆ 21-07-1891ರಿಂದ ಒದಗಿಸುತ್ತಾ ಬಂದಿರುತ್ತದೆ. 1989ರಲ್ಲಿ ಸಾರ್ವಜನಿಕರಿಗೆ ನೀಡುತ್ತಿದ್ದ ವಿಮಾ ಸೌಲಭ್ಯವನ್ನು ರದ್ದುಪಡಿಸಿ, ಸರ್ಕಾರಿ ನೌಕರರಿಗೆ ( Government Employees ) ನೀಡುತ್ತಿದ್ದ ವಿಮಾ ಸೌಲಭ್ಯವನ್ನು ಮುಂದುವರಿಸಲಾಯಿತು. ಅಂದಿನಿಂದ ಈವರೆಗೆ ಸುಮಾರು 60 ವರ್ಷಗಳಿಂದ ಸರ್ಕಾರಿ ನೌಕರರಿಗೆ ವಿಮಾ ಸೌಲಭ್ಯವನ್ನು 55 ವರ್ಷ ವಯಸ್ಸಿನವರೆಗೆ ಮಾತ್ರ ನೀಡಲಾಗುತ್ತಿದೆ ಎಂದಿದೆ.

ಸಾರ್ವಜನಿಕರಿಗೆ ಸಿಹಿ ಸುದ್ದಿ ; ಖಾತೆಗೆ ಶೀಘ್ರ ಸಿಲಿಂಡರ್ ‘ಸಬ್ಸಿಡಿ’ ಜಮೆ, ಈಗ ₹587ಗೆ ‘LPG ಗ್ಯಾಸ್’ ಲಭ್ಯ

ರಾಜ್ಯ ಸರ್ಕಾರವು ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ವರ್ಷಗಳಿಗೆ ಹೆಚ್ಚಿಸಲಾಯಿತು. 2006ರಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷಗಳಿಗೆ ಹೆಚ್ಚಿಸಲಾಯಿತು. ಆದರೇ ನಿವೃತ್ತಿ ವಯಸ್ಸನ್ನು ಸರ್ಕಾರ 55 ವರ್ಷಗಳಿಂದ 60 ವರ್ಷಗಳಿಗೆ ಹೆಚ್ಚಿಸಿದ್ದರೂ ಕೂಡ ಇಲಾಖೆಯು ವಿಮಾ ಸೌಲಭ್ಯವನ್ನು ಸರ್ಕಾರಿ ನೌಕರರ ವಯಸ್ಸು 55 ವರ್ಷಗಳ ಅವಧಿಗೆ ಮಾತ್ರ ನೀಡಲಾಗುತ್ತಿದೆ ಎಂದು ಹೇಳಿದೆ.

BIG BREAKING NEWS: 15,000 ಶಾಲಾ ಶಿಕ್ಷಕರ ನೇಮಕಾತಿ: ಈ ವಾರ 1:1 ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ | Karnataka Teacher Recruitment

ಹೀಗೆ 55 ವರ್ಷದವರೆಗೆ ನೀಡಲಾಗುತ್ತಿರುವುದರಿಂದ ಸರ್ಕಾರಿ ನೌಕರರಿಗೆ 5 ವರ್ಷದವರೆಗೆ ವಿಮಾ ಸೌಲಭ್ಯದಿಂದ ವಂಚಿತರಾಗುವಂತೆ ಆಗಿತ್ತು. ಅಲ್ಲದೇ ಸರ್ಕಾರಿ ನೌಕರರು ಅಕಾಲಿಕ ಮರಣ ಹೊಂದಿದರೇ ಅವರ ಅವಲಂಭಿತ ಕುಟುಂಬಕ್ಕೆ ದೊರೆಯುತ್ತಿದ್ದ ಆರ್ಥಿಕ ಭದ್ರತೆಯಿಂದ ವಂಚಿತವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಸರ್ಕಾರಿ ನೌಕರರ ಹಿತದೃಷ್ಠಿಯಿಂದ ವಿಮಾ ಸೌಲಭ್ಯವನ್ನು 55 ವರ್ಷಗಳಿಂದ 60 ವರ್ಷಗಳವೆರೆ ಹೆಚ್ಚಿಸಿ, ಆದೇಶಿಸಲಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ

Share.
Exit mobile version