ನವದೆಹಲಿ: ಹಿರಿಯ ನಾಗರೀಕರ ಸ್ಥಿರ ಠೇವಣಿಗಳ(ಎಫ್ ಡಿ) ಮೇಲಿನ ಬಡ್ಡಿದರ ಮೂರು ವರ್ಷಗಳ ಬಳಿಕ ಶೇ.8ಕ್ಕೇರಿಸಿದೆ. ಈ ಮೂಲಕ ಹಿರಿಯ ನಾಗರೀಕರಿಗೆ ಭರ್ಜರಿ ಗುಡ್ ನ್ಯೂಸ್ ದೊರೆತಂತೆ ಆಗಿದೆ.

ಕೊರೋನಾ ತಂದಿಟ್ಟಂತ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಹಿರಿಯ ನಾಗರೀಕರ ಎಫ್ ಡಿ ಮೇಲಿನ ಬಡ್ಡಿದರವನ್ನು ಇಳಿಸಲಾಗಿತ್ತು. ಇದೀಗ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿರುವ ಕಾರಣ ಸಾಲದ ಬಡ್ಡಿದರದ ಜೊತೆಗೆ, ಠೇವಣಿ ಬಡ್ಡಿದರವನ್ನೂ ಹೆಚ್ಚಿಸಲಾಗಿದೆ.

ಸದ್ಯ ಕೆಲ ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಶೇ.8ರಷ್ಟು ಬಡ್ಡಿದರ ನೀಡುತ್ತಿವೆ. ಸರ್ಕಾರವು ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿಯಲ್ಲಿ ಸ್ಥಿರ ಠೇವಣಿಗಳ ಮೇಲಿನ ಆದಾಯವನ್ನು 7.4 ರಿಂದ 8ಕ್ಕೆ ಹೆಚ್ಚಿಸಿದೆ.

ಪ್ರಯಾಣಿಕರ ಮೂತ್ರ ವಿರಸರ್ಜನೆ ಎಫೆಕ್ಟ್: ಏರ್ ಇಂಡಿಯಾದಲ್ಲಿ ಇನ್ಮುಂದೆ ಮದ್ಯ ಸೇವೆ ಬಂದ್?

ನವದೆಹಲಿ: ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಪಾನಮತ್ತ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆ ಘಟನೆ ನಡೆದ ಬಳಿಕ, ಏರ್ ಇಂಡಿಯಾ ವಿಮಾನದಲ್ಲಿ ಮದ್ಯ ವಿತರಣೆಯನ್ನು ನಿಷೇಧಿಸಲಾಗುತ್ತಿದೆ ಎನ್ನಲಾಗುತ್ತಿದೆ.

ಕಳೆದ ಶನಿವಾರದಂದು ಏರ್ ಇಂಡಿಯಾ ವಿಮಾದನಲ್ಲಿ ವ್ಯಕ್ತಿಯೊಬ್ಬ ಪಾನಮತ್ತ ಸ್ಥಿತಿಯಲ್ಲಿ ಮಹಿಳೆಯ ಮೇಲೆಯೇ ಮೂತ್ರ ವಿರಸರ್ಜನೆ ಮಾಡಿದ್ದನು. ಈ ಬಗ್ಗೆ ಏರ್ ಇಂಡಿಯಾದ ಸಿಇಒ ಕ್ಯಾಂಪ್ ಬೆಲ್ ವಿಲ್ಸನ್ ಘಟನೆಯ ಬಗ್ಗೆ ಕ್ಷಮೆಯಾಚಿಸಿದ್ದರು.

ಮುಂದಿನ ದಿನಗಳಲ್ಲಿ ಇಂತಹ ಘಟನೆ ಸಂಭವಿಸದಂತೆ ನೋಡಿಕೊಳ್ಳುತ್ತೇವೆ. ಈ ಹಿನ್ನಲೆಯಲ್ಲಿಯೇ ವಿಮಾನದಲ್ಲಿ ಮದ್ಯ ವಿತರಣೆ ನೀತಿಯನ್ನು ಮರುಪರಿಶೀಲಿಸೋದಾಗಿ ಹೇಳುವ ಮೂಲಕ, ರದ್ದು ಪಡಿಸೋ ಸುಳಿವನ್ನು ನೀಡಿದ್ದಾರೆ.

ಡಿಸೆಂಬರ್ 26ರಂದು ನಡೆದ ಮದ್ಯ ಸೇವಿಸಿದಂತ ವ್ಯಕ್ತಿ ಮೂತ್ರ ವಿಸರ್ಜನೆ ಪ್ರಕರಣ ಸಂಬಂಧ ಈಗಾಗಲೇ ನಾವು ನಾಲ್ವರು ವಿಮಾನ ಸಿಬ್ಬಂದಿ ಮತ್ತು ಪೈಲಟ್ ಗೆ ನೋಟಿಸ್ ನೀಡಲಾಗಿದ್ದೆ. ಆಂತರೀಕ ವರದಿ ಸಲ್ಲಿಕೆವರೆಗೂ ಅವರನ್ನು ಕರ್ತವ್ಯಕ್ಕೆ ಹಾಜರಾಗದಂತೆ ಸೂಚಿಸಲಾಗಿದೆ ಎಂಬುದಾಗಿಯೂ ತಿಳಿಸಿದ್ದಾರೆ.

Watch Video: ಹೊಸ ವರ್ಷದ ‘ಮೊದಲ ಸೂರ್ಯೋದಯ’ ಹೇಗಿತ್ತು ಗೊತ್ತಾ.? ಇಲ್ಲಿದೆ ವೀಡಿಯೋ ನೋಡಿ

BIGG NEWS : ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : `ರಾಷ್ಟ್ರೀಯ ಅವಿಷ್ಕಾರ್ ಅಭಿಯಾನ’ದಡಿ `ರಸಪ್ರಶ್ನೆ’ ಕಾರ್ಯಕ್ರಮ

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಾಟ್ಸಾಪ್, ಕ್ಯೂ ಆರ್ ಕೋಡ್ ಮೂಲಕ ಒಮ್ಮೆಗೆ  ಟಿಕೆಟ್ ಖರೀದಿಗೆ ಅವಕಾಶ

Share.
Exit mobile version