ಬೆಂಗಳೂರು: ವಿವಿಧ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದಂತ ಗ್ರಾಮೀಣ ಹಾಗೂ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ ಯಶಸ್ವಿನಿ, ಅಕ್ಟೋಬರ್ 2ರಂದು ಮರು ಜಾರಿಗೊಳ್ಳಲಿದೆ. ಈ ಮೂಲಕ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ಸಿಗಲಿದೆ.

ರಾಜ್ಯ ಸರ್ಕಾರದಿಂದ ಯಶಸ್ವಿನಿ ಯೋಜನೆ ( Yashasvini Scheme ) ಮರು ಜಾರಿಗಾಗಿ 300 ಕೋಟಿ ರೂ ಮೀಸಲಿಟ್ಟಿದೆ. ಕೆಲವು ಮಾರ್ಪಾಡುಗಳೊಂದಿಗೆ ಈ ಯೋಜನೆ ಮರು ಜಾರಿಯಾಗಲಿದೆ. ರೈತರು ಹಾಗೂ ಸಹಕಾರಿಗಳ ಒತ್ತಡಕ್ಕೆ ಮಣಿದಂತ ರಾಜ್ಯ ಸರ್ಕಾರ, ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ, ಅಕ್ಟೋಬರ್ 2ರಂದು ಮರುಜಾರಿಗೊಳಿಸಿ, ಅನುಷ್ಠಾನಗೊಳಿಸುತ್ತಿದೆ.

BIG NEWS: ‘ನವ್ಯಶ್ರೀ ಹನಿಟ್ರಾಫ್ ಕೇಸ್’ಗೆ ಮತ್ತೊಂದು ಟ್ವಿಸ್ಟ್: ಟಾಕಳೆ ವಿರುದ್ಧ ಅತ್ಯಾಚಾರ, ಗರ್ಭಪಾತ ಪ್ರಕರಣ ದಾಖಲು

ಅಂದಹಾಗೇ ಏಪ್ರಿಲ್ 1ರಂದು ಕೇಂದ್ರ ಸಹಾಕರ ಸಚಿವ ಅಮಿತ್ ಶಾ ಯಶಸ್ವಿನಿ ಯೋಜನೆ ಲೋಗೋ ಲೋಕಾರ್ಪಣೆ ಮಾಡಿದ್ದರು. ಇಂತಹ ಯೋಜನೆಯ ಮರು ಜಾರಿಯಿಂದ ರಾಜ್ಯದ ಸುಮಾರು 50 ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆಯುವಂತೆ ಆಗಲಿದೆ.

ಇನ್ನೂ ಯಶಸ್ವಿನಿ ಯೋಜನೆಯ ಅಡಿಯಲ್ಲಿ 14 ವಿಭಾಗಗಳಲ್ಲಿ ಗುರುತಿಸಲಾದ 823 ಶಸ್ತ್ರ ಚಿಕಿತ್ಸೆಗಳಿಗೆ ನಗದು ರಹಿತ ಸೌಲಭ್ಯದೊಂದಿಗೆ ಚಿಕಿತ್ಸೆ ದೊರೆಯಲಿದೆ. ಈ ಯೋಜನೆಯಡಿ ರಾಜ್ಯ 726 ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ಪಡೆಯಬಹುದಾಗಿದೆ.

Share.
Exit mobile version