ನವದೆಹಲಿ: ರುಪೇ ಕ್ರೆಡಿಟ್ ಕಾರ್ಡ್ ( rupay credit card ) ಬಳಕೆಗೆ ಶುಲ್ಕ ವಿಧಿಸಲಾಗುತ್ತದೆ ಎನ್ನಲಾಗಿತ್ತು. ಈ ಮೂಲಕ ರುಪೇ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶಾಕ್ ಆಗುವಂತೆ ಮಾಡಿತ್ತು. ಆದ್ರೇ ಅಂತಹ ಯಾವುದೇ ಶುಲ್ಕವನ್ನು ವಿಧಿಸೋದಿಲ್ಲ ಎಂಬುದಾಗಿ ಎನ್ ಪಿಸಿಐ ಸ್ಪಷ್ಟ ಪಡಿಸಿದೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ಭಾರತ ರಾಷ್ಟ್ರೀಯ ಪೇಮೆಂಟ್ಸ್ ನಿಗಮ(ಎನ್ ಪಿಸಿಐ), ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ನಲ್ಲಿ (UPI) ರೂ.2000ವರೆಗಿನ ವ್ಯವಹಾರಕ್ಕೆ ರುಪೇ ಕ್ರೆಡಿಟ್ ಕಾರ್ಡ್ ಬಳಕೆಗೆ ಯಾವುದೇ ಶುಲ್ಕವಿಧಿಸುವುದಿಲ್ಲ ಎಂಬುದಾಗಿ ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ( RBI) ನಿರ್ದೇಶನದಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ರುಪೇ ಕ್ರೆಡಿಟ್ ಕಾರ್ಡ್ ಬಳಕೆದಾರರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂಬುದಾಗಿ ಹೇಳಿದೆ.

ಅಂದಹಾಗೇ ರುಪೇ ಕ್ರೆಡಿಟ್ ಕಾರ್ಡ್ ಕಳೆದ ನಾಲ್ಕು ವರ್ಷಗಳಿಂದ ಬಳಕೆಯಲ್ಲಿದ್ದು, ಎಲ್ಲಾ ಪ್ರಮುಖ ಬ್ಯಾಂಕ್ ಗಳಲ್ಲಿ ಅದು ಸ್ವೀಕೃತವಿದೆ. ವಾಣಿಜ್ಯ ಮತ್ತು ಚಿಲ್ಲರೆ ಎರಡೂ ವಲಯಗಳಿಗೆ ಅವು ಹೆಚ್ಚುವರಿ ಕಾರ್ಡ್ ಗಳನ್ನು ನೀಡುತ್ತಿವೆ.

Share.
Exit mobile version