ಬೆಂಗಳೂರು :  ಸಿಲಿಕಾನ್‌ ಸಿಟಿ ರಸ್ತೆಗಳೆಂದರೆ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅದರಲ್ಲೂ ಹಾರ್ನ್ ಸದ್ದುಗಳ ನಡುವೆ ಇದೀಗ ರಸ್ತೆ ಹಂಪ್ಸ್‌ಗಳ ಕಾಟ ಮಾತ್ರ ಕಮ್ಮಿಯೇನಿಲ್ಲ. ಇದೀಗ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದ ರಸ್ತೆ ಹಂಪ್ಸ್‌ಗಳನ್ನು ತೆರವುಗೊಳಿಸೋದಕ್ಕಾಗಿ ಟ್ರಾಫಿಕ್ ಪೊಲಿಸರು ನಿರ್ಧರಿಸಿದ್ದಾರೆ.

Health tips :‌ ಚಳಿಗಾಲದಲ್ಲಿ ʼಗರ್ಭಿಣಿಯರ ಆರೈಕೆʼಹೇಗಿರಬೇಕು ಗೊತ್ತಾ? ಈ ವಿಧಾನಗಳನ್ನು ಅನುಸರಿಸಿ | Pregnant Women In Winter Season

ಅವೈಜ್ಞಾನಿಕ ಹಪ್ಸ್‌ಗಳಿಂದ ಅನೇಕ ಜನರು ಬೆನ್ನು ಮೂಳೆ ಮುರಿದುಕೊಂಡಿದ್ದು,  ಹಪ್ಸ್‌ಗಳು ಸರಿಯಾಗಿ ಕಾಣದೆ ವಾಹನ ಚಾಲಕರು ಇನ್ನೊಬ್ಬರಿಗೆ ಗುದ್ದಿ ಹಲವು ಗಂಭೀರ ಅಪಘಾತಗಳು ನಡೆದಿವೆ.  ಟ್ರಾಫಿಕ್‌ ಕಿರಿಕಿರಿಯನ್ನು ತಪ್ಪಿಸೋದಕ್ಕೆ ಸೂಕ್ತವಾಗಿ ಈ ಎಲ್ಲ ಅಂಶಗಳನ್ನು ಗುರಿಯಾಗಿಟ್ಟುಕೊಂಡು  ಹಂಪ್ಸ್‌  ತೆರವಿಗೆ ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.

Health tips :‌ ಚಳಿಗಾಲದಲ್ಲಿ ʼಗರ್ಭಿಣಿಯರ ಆರೈಕೆʼಹೇಗಿರಬೇಕು ಗೊತ್ತಾ? ಈ ವಿಧಾನಗಳನ್ನು ಅನುಸರಿಸಿ | Pregnant Women In Winter Season

ಸರಿಯಾಗಿ ವೈಜ್ಞಾನಿಕ ವಿಧಾನದಲ್ಲಿ ಹಾಕಲಾಗಿರುವ ಹಂಪ್ಸ್‌ಗಳನ್ನು ಬಿಟ್ಟು ಉಳಿದ ಹಂಪ್ಸ್‌ಗಳ ತೆರವಿಗೆ ಮುಂದಾಗಿದ್ದಾರೆ. ಈಗಾಗಲೇ ನಗರದ ವಿವಿಧ ಭಾಗಗಳಲ್ಲಿ 427 ಅವೈಜ್ಞಾನಿಕ ಹಂಪ್ಸ್‌ಗಳನ್ನು ಗುರುತಿಸಿದ್ದು, ಸರಿಯಾದ ರೀತಿಯಲ್ಲಿ ಅಳವಡಿಸುವಂತೆ ಬಿಬಿಎಂಪಿಗೆ ಖಡಕ್‌ ಸೂಚನೆ ಯನ್ನು ನೀಡಲಾಗಿದೆ .

Share.
Exit mobile version