ನವದೆಹಲಿ: ನೀವು ವಾಹನವನ್ನು ( Vehicle ) ಎಷ್ಟು ಡ್ರೈವ್ ಮಾಡುವಿರೋ ಅದರ ಅನುಸಾರ ಪ್ರೀಮಿಯಂ ಪಾವತಿಸುವಂತ ಹೊಸ ವಿಮೆ ಯೋಜನೆಯನ್ನು ( News Vehicle Insurance ) ಡಿಜಿಟ್ ಜನರಲ್ ಇನ್ಸೂರೆನ್ಸ್ ಕಂಪನಿಯು ( Insurance Company ) ಆರಂಭಿಸಿದೆ. ಇದು ಭಾರತದಲ್ಲಿಯೇ ಆರಂಭಗೊಂಡ ಮೊದಲ ವಿನೂತನ ಯೋಜನೆಯಾಗಿದೆ. ಈ ಮೂಲಕ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಜನತೆಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ಅಮುಲ್, ಮದರ್ ಡೈರಿ ಹಾಲಿನ ದರ 2 ರೂ ಹೆಚ್ಚಳ | Milk Price Hike

ಈ ಕುರಿತಂತೆ ಡಿಜಿಟ್ ಜನರಲ್ ಇನ್ಸೂರೆನ್ಸ್ ಕಂಪನಿಯು ಮಾಹಿತಿ ಬಿಡುಗಡೆ ಮಾಡಿದ್ದು, ಕಡಿಮೆ ವಾಹನ ಬಳಕೆಯನ್ನು ಮಾಡುವ ಗ್ರಾಹಕರಿಗೆ ಕಡಿಮೆ ಡ್ರೈವ್ – ಕಡಿಮೆ ಪಾವತಿ ಎನ್ನುವ ಆಯ್ಕೆಯು ಪ್ರಯೋಜನಕಾರಿಯಾಗಿದೆ ಎಂದು ಹೇಳಿದೆ.

BIG NEWS: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಹಿಂದಿನ ಸ್ಪೋಟಕ ರಹಸ್ಯ ಬಯಲು

ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಖಾಸಗಿ ಜನರಲ್ ಇನ್ಸೂರೆನ್ಸ್ ಸಂಸ್ಥೆಗಳಲ್ಲಿ ಗೋ ಡಿಜಿಟ್ ಜನರಲ್ ಇನ್ಸೂರೆನ್ಸ್ ಕಂಪನಿ, ಮೋಟಾರ್ ಇನ್ಸೂರೆನ್ ಓನ್ ಡ್ಯಾಮೇಜ್ ಪಾಲಿಸಿಗಳಿಗಾಗಿ ಪೇ ಆಸ್ ಯು ಡ್ರೈವ್ ಎನ್ನುವ ಆಯ್ಕೆಯನ್ನು ನೀಡಿದೆ. ಈ ಮೂಲಕ ವಾಹನ ಸವಾರರಿಗೆ ಶೇ.25ರವರೆಗೆ ಪ್ರಿಮಿಯಂ ರಿಯಾಯತಿ ಕೂಡ ಸಿಗಲಿದೆ. ಇಂತಹ ಆಡ್ – ಆನ್ ವೈಶಿಷ್ಟ್ಯವನ್ನು ಪರಿಚಯಿಸಿದ ಭಾರತದ ಮೊದಲ ಇನ್ಸೂರೆನ್ಸ್ ಕಂಪನಿ ಇದಾಗಿದೆ.

Share.
Exit mobile version