ಬೆಂಗಳೂರು : ಕಳೆದ ಹಲವು ದಿನಗಳಿಂದ ಪೆಟ್ರೋಲ್(Petrol), ಡಿಸೇಲ್(diesel)ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಇದೀಗ ಗುಡ್‌ನ್ಯೂಸ್ ಕೊಟ್ಟಿದ್ದು, ಇದೀಗ ಕೇರಳಕ್ಕಿಂತ ಕರ್ನಾಟಕದಲ್ಲಿ ಇಂಧನ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಬರೊಬ್ಬರಿ 8 ರೂಪಾಯಿ ದರ ಕಡಿಮೆಯಾಗಿದೆ.
ಸಾಮಾನ್ಯವಾಗಿ ಕಾರು, ದ್ವಿಚಕ್ರ ವಾಹನ ಸವಾರರು ಟ್ಯಾಂಕ್ ಫುಲ್ ಮಾಡಿಸುವ ಮುನ್ನ ಇವತ್ತಿನ ದರ ಎಷ್ಟು ಎಂದು ಒಮ್ಮೆ ಕಣ್ಣಾಹಾಯಿಸುತ್ತಾರೆ. ಆದರೆ ಇಂಧನ ಬೆಲೆ ದಿನದಿಂದ ದಿನಕ್ಕೆ ವ್ಯತ್ಯಾಸ ಆಗುತ್ತಿರುತ್ತದೆ. ಆದ್ರೆ ಇಂದು ರಾಜ್ಯದ ಗಡಿ ಭಾಗದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ ಕಂಡಿದೆ. ಕರ್ನಾಟಕ ಪೆಟ್ರೋಲ್-ಡೀಸೆಲ್ ಬಂಕ್ ಮಾಲೀಕರು ಕೇರಳದ ಜನತೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ವಿಶೇಷ ಫಲಕಗಳನ್ನು ಅಳವಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಕೇರಳದಲ್ಲಿ ಬಜೆಟ್ ಮಂಡನೆ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ನಮ್ಮಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಿ ಎಂದು ಗಡಿ ಭಾಗವಾದಲ್ಲಿ ಬ್ಯಾನರ್ ಕೂಡ ಹಾಕುವ ಮೂಲಕ ಪ್ರಚೋದನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೇರಳ ಮತ್ತು ಕರ್ನಾಟಕದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಎಷ್ಟಿದೆ?
ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.60 ರೂ ಮತ್ತು ಡೀಸೆಲ್ ಬೆಲೆ 95.52 ರೂ. ಆಗಿದೆ.
ಕರ್ನಾಟಕಕ್ಕೆ ಬಂದಾಗ ಪೆಟ್ರೋಲ್ ಬೆಲೆ 102 ರೂ., ಡೀಸೆಲ್ ಬೆಲೆ 87.36 ರೂ. ಈ ಹಿಂದೆ ಡೀಸೆಲ್ ದರ 7 ರೂಪಾಯಿ ಕಡಿಮೆ ಇರುವ ಕಾರಣ ಕರ್ನಾಟಕಕ್ಕೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಇಂಧನ ತುಂಬಿಸಿಕೊಂಡು ಬರುವಂತೆ ಸೂಚನೆ ನೀಡಿತ್ತು.
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಈ ನಿಟ್ಟಿನಲ್ಲಿ ಕೇರಳದಿಂದ ಕರ್ನಾಟಕಕ್ಕೆ ಬರುವ ವಾಹನಗಳು ಹೆಚ್ಚಾಗಿ ಕರ್ನಾಟಕದಲ್ಲೇ ಪೆಟ್ರೋಲ್ ಡಿಸೇಲ್ ತುಂಬಿಸಿಕೊಳ್ಳುವುದು ಹೆಚ್ಚಾಗಿದಂತೂ ನಿಜ.