ಬೆಂಗಳೂರು: ಮಾನ್ಯ ಸಾರಿಗೆ ಹಾಗೂ ಮುಜರಾಯಿ‌ ಸಚಿವರ ಆದೇಶದಂತೆ
ನಿವೃತ್ತಿ ಹೊಂದಿದ ಅಧಿಕಾರಿಗಳು ಹಾಗೂ ನೌಕಕರು ಸುಮಾರು 10000 ಮಂದಿಗೆ ಈ ಹಿಂದೆ ದಿನಾಂಕ 01.03.2023 ರಿಂದ ಜಾರಿಗೊಳಿಸಿದ
ಶೇ.15 ರಷ್ಟು ಹೆಚ್ಚಿಸಿ ಅದರಂತೆ ವೇತನ ಶ್ರೇಣಿಗಳನ್ನು ಪರಿಷ್ಕರಿಸಿ, ಅಂತಿಮ ಆರ್ಥಿಕ ಸೌಲಭ್ಯಗಳಾದ ಉಪದಾನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣ( ಅಂದಾಜು ನಾಲ್ಕು ಸಾರಿಗೆ ನಿಗಮಗಳ ಮೊತ್ತ ರೂ.220 ಕೋಟಿ ) ಬಿಡುಗಡೆ ಮಾಡಲು ಆದೇಶ

ಈ ಸಂಬಂಧ ಹಲವು ಬಾರಿ ಮಾನ್ಯ ಸಾರಿಗೆ ಸಚಿವರನ್ನು ಭೇಟಿ ಮಾಡಿ ನಮಗೆ ಸದರಿ ಆದೇಶವನ್ನು ಬಿಡುಗಡೆಗೊಳಿಸಬೇಕೆಂದು ಕಾರ್ಮಿಕ ಸಂಘಟನೆಗಳ‌ ಮುಖಂಡರುಗಳು ಮನವಿ ಸಲ್ಲಿಸಿದ್ದರು. ಈ‌ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮಾರ್ಚ್ ನಲ್ಲಿಯೇ ಭರವಸೆ ನೀಡಿದ್ದ ಸಾರಿಗೆ ಸಚಿವರು ಚುನಾವಣೆ‌ ನೀತಿ ಸಂಹಿತೆ ಕಾರಣ ಬಿಡುಗಡೆಯಾಗದೆ ಉಳಿದಿದ್ದ ಆದೇಶಕ್ಕೆ ಇಂದು ಸಹಿಯಾಗಿದೆ.

ಸರ್ಕಾರದ ಆದೇಶ ಸಂಖ್ಯೆ ಟಿ.ಡಿ 12 ಟಿಸಿಬಿ 2023 ಬೆಂಗಳೂರು ದಿನಾಂಕ 17.03.2023 ರಲ್ಲಿ ಅಧಿಕಾರಿ ಮತ್ತು ನೌಕರರು ದಿನಾಂಕ 31.12.2019 ರಂದು ಪಡೆಯುತ್ತಿದ್ದ ಮೂಲವೇತನವನ್ನು ಶೇ.15 ರಷ್ಟು ಹೆಚ್ಚಿಸಿ ಅದರಂತೆ ವೇತನ ಶ್ರೇಣಿಗಳನ್ನು ಪರಿಷ್ಕರಿಸಿ, ದಿನಾಂಕ 01.03.2023 ರಿಂದ ಜಾರಿಗೊಳಿಸಲು ಆದೇಶಿಸಿರುವಂತೆ, ದಿನಾಂಕ 01.03.2023 ರಂದು ಸಂಸ್ಥೆಯ ಸೇವೆಯಲ್ಲಿದ್ದ (On Roll) ಅಧಿಕಾರಿ/ನೌಕರರಿಗೆ ದಿನಾಂಕ 01.01.2020 ರಿಂದ ದಿನಾಂಕ 28.02.2023 ರ ಅವಧಿಯನ್ನು ನೋಷನಲ್ ಆಗಿ ಪರಿಗಣಿಸಿ ವೇತನ ನಿಗದಿಪಡಿಸಿ, ದಿನಾಂಕ 01.03.2023 ರಿಂದ ಜಾರಿಗೊಳಿಸಿ, ಏಪ್ರಿಲ್-2023 ರ ಮಾಹೆಯಿಂದ ಮತ್ತು ಮುಂದಕ್ಕೆ ವೇತನದಲ್ಲಿ ಅನುಷ್ಠಾನಗೊಳಿಸಲು ಹಾಗೂ ಮಾರ್ಚ್-2023 ರ ಮಾಹೆಯ ವ್ಯತ್ಯಾಸವನ್ನು ಏಪ್ರಿಲ್-2023 ರ ಮಾಹೆಯ ವೇತನದೊಂದಿಗೆ ಸೇರಿಸಿ ಪಾವತಿಸಲು ಸುತ್ತೋಲೆ ಸಂಖ್ಯೆ 16/2023 ದಿನಾಂಕ 28.03.2023 ರಲ್ಲಿ ತಿಳಿಸಲಾಗಿತ್ತು.

ಪ್ರಸ್ತುತ ದಿನಾಂಕ 01.01.2020 ರಿಂದ ದಿನಾಂಕ 28.02.2023 ರ ಅವಧಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ಅಧಿಕಾರಿ/ನೌಕರರಿಗೆ ಅರ್ಹ ದಿನಾಂಕದವರೆಗೆ ವೇತನವನ್ನು ನೋಷನಲ್ ಆಗಿ ನಿಗದಿಪಡಿಸಲು ಹಾಗೂ ನಿಗದಿಪಡಿಸಿದ ವೇತನವನ್ನು ಅಧಿಕಾರಿ/ನೌಕರನು ಅಂತಿಮ ದಿನಾಂಕದಂದು ಪಡೆಯುತ್ತಿದ್ದ ಮೂಲವೇತನವೆಂದು ಪರಿಗಣಿಸಿ, ಅಂತಿಮ ಆರ್ಥಿಕ ಸೌಲಭ್ಯಗಳಾದ ಉಪದಾನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಗಳನ್ನು ಮಾತ್ರ ಲೆಕ್ಕಾಚಾರ ಮಾಡಿ ಪಾವತಿಸಲು ಅನುಮೋದನೆ ನೀಡಲಾಗಿದೆ.

ಅದರಂತೆ ದಿನಾಂಕ 01.01.2020 ರಿಂದ ದಿನಾಂಕ 28.02.2023 ರ ಅವಧಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ಅಧಿಕಾರಿ/ನೌಕರರಿಗೆ ಅರ್ಹ ದಿನಾಂಕದವರೆಗೆ ಸುತ್ತೋಲೆ ಸಂಖ್ಯೆ 16/23 ರಲ್ಲಿ ತಿಳಿಸಿರುವ ವಿಧಾನಗಳನ್ನು ಅನುಸರಿಸಿ, ಪರಿಷ್ಕೃತ ವೇತನ ನಿಗದಿ (ನೋಷನಲ್ ಆಗಿ) ಪಟ್ಟಿಗಳನ್ನು ದಿನಾಂಕ 31.08.2024 ರೊಳಗಾಗಿ ತಯಾರಿಸಲು ಅಗತ್ಯ ಕ್ರಮಕೈಗೊಳ್ಳುವುದು.

ನೋಷನಲ್ ಆಗಿ ನಿಗದಿಪಡಿಸಿದ ಪರಿಷ್ಕೃತ ಮೂಲವೇತನವನ್ನು ಅಂತಿಮ ಆರ್ಥಿಕ ಸೌಲಭ್ಯಗಳಾದ ಉಪದಾನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಗಳ ವ್ಯತ್ಯಾಸಗಳ ಪಾವತಿಗಾಗಿ ಮಾತ್ರ ಪರಿಗಣಿಸುವುದು.

ಮುಂದುವರೆದು ಅರ್ಹ ಸೇವಾ ವಿಮುಕ್ತ ಅಧಿಕಾರಿ/ನೌಕರರ ಪರಿಷ್ಕೃತ ವೇತನ ನಿಗದಿಯನ್ವಯ ಉಪದಾನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಗಳ ವ್ಯತ್ಯಾಸಗಳನ್ನು ಲೆಕ್ಕಾಚಾರಗೊಳಿಸಿ, ಗಳಿಕೆ ರಜೆ ನಗದೀಕರಣ ಬಿಲ್ಲಿನಲ್ಲಿ ಶಾಸನ ಬದ್ದ ಕಡಿತಗಳನ್ನು ಹಾಗೂ ಅಧಿಕಾರಿ/ನೌಕರನಿಂದ ಬರಬೇಕಾದ ಯಾವುದೇ ಬಾಕಿ ಮೊತ್ತವಿದ್ದಲ್ಲಿ ಕಡಿತಗೊಳಿಸಿ ಪಾವತಿಸಬೇಕಾದ ನಿವ್ವಳ ಮೊತ್ತದ ಕ್ಲೀಮ್‌ಗಳನ್ನು ದಿನಾಂಕ 30.09.2024 ರೊಳಗಾಗಿ ಸಿದ್ದಪಡಿಸಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳುವುದು.

ಕರಾರಸಾ/ಬೆಂಮನಸಾ/ವಾಕರಸಾ/ಕಕರಸಾ ಸಂಸ್ಥೆಗಳು ಉಪದಾನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಗಳ ವ್ಯತ್ಯಾಸದ ಕ್ಲೀಮ್‌ಗಳ ಪಾವತಿಯ ಕುರಿತು ಆಯಾ ಸಂಸ್ಥೆಗಳು ಆರ್ಥಿಕ ಪರಿಸ್ಥಿತಿಗನುಗುಣವಾಗಿ ನಿರ್ಧರಿಸಿ, ಸಾಧ್ಯವಾದಲ್ಲಿ 2024-25 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಪಾವತಿಸಲು ಅಗತ್ಯ ಕ್ರಮಕೈಗೊಳ್ಳುವುದು.

Share.
Exit mobile version