ಸುಭಾಷಿತ :

Tuesday, April 7 , 2020 6:59 PM

ರಾಜ್ಯದ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ : ಹಾಲಿನ ಶೇಖರಣೆ ದರ 1 ರೂ ಹೆಚ್ಚಳ


Tuesday, February 18th, 2020 1:01 pm

ಕಲಬುರಗಿ : ಕಲಬುರಗಿ, ಬೀದರ ಹಾಗೂ ಯಾದಗಿರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಪ್ರಸ್ತುತ ನೀಡುತ್ತಿರುವ ಹಾಲು ಶೇಖರಣೆ ದರಕ್ಕೆ ಪ್ರತಿ ಕೆ.ಜಿ. ಆಕಳ ಮತ್ತು ಎಮ್ಮೆ ಹಾಲಿಗೆ 2020ರ ಫೆಬ್ರವರಿ 24ರ ಬೆಳಿಗ್ಗೆ ಸರತಿಯಿಂದ ಜಾರಿಗೆ ಬರುವಂತೆ 1 ರೂ. ಶೇಖರಣೆ ದರ ಹೆಚ್ಚಳ ಮಾಡಿ ಪರಿಷ್ಕರಿಸಲಾಗಿದೆ ಎಂದು ಹಾಲು ಒಕ್ಕೂಟದ ಅಧ್ಯಕ್ಷ ಆರ್. ಕೆ. ಪಾಟೀಲ ಅವರು ತಿಳಿಸಿದ್ದಾರೆ.

ಕಲಬುರಗಿ-ಬೀದರ್ ಹಾಗೂ ಯಾದಗಿರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಕಲಬುರಗಿಯಲ್ಲಿ ಸೋಮವಾರ ಜುರುಗಿದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಹಾಲು ಉತ್ಪಾದನೆ ಅಭಿವೃದ್ಧಿಪಡಿಸಲು ಒಕ್ಕೂಟವು ಶೇಖರಣೆ ದರವನ್ನು ಹೆಚ್ಚಳ ಮಾಡಿದೆ. ಹಾಲು ಉತ್ಪಾದಕರು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಗುಣಮಟ್ಟದ ಹಾಲನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಘಕ್ಕೆ ಪೂರೈಸಬೇಕೆಂದು ಅವರು ತಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions