ನವದೆಹಲಿ : ಉದ್ಯೋಗ ನಿರೀಕ್ಷಿತರಿಗೆ ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡಲು ಸುವರ್ಣಾವಕಾಶವಿದೆ. ವಾಸ್ತವವಾಗಿ, ರಕ್ಷಣಾ ಸಚಿವಾಲಯವಾದ ಡಿಫೆನ್ಸ್ ಎಸ್ಟೇಟ್ಸ್ ಆರ್ಗನೈಸೇಷನ್ ಜೂನಿಯರ್ ಹಿಂದಿ ಟ್ರಾನ್ಸ್ ಲೇಟರ್, ಸಬ್ ಡಿವಿಜನಲ್ ಆಫೀಸರ್ ಗ್ರೇಡ್-2 ಮತ್ತು ಹಿಂದಿ ಟೈಪಿಸ್ಟ್ 97 ಹುದ್ದೆಗಳನ್ನ ನೇಮಕ ಮಾಡಿದೆ. ಅದಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ಪೋಸ್ಟ್ʼಗಳಿಗೆ ಅರ್ಜಿಗಳನ್ನು ಆಫ್ ಲೈನ್ ಮೋಡ್ʼನಲ್ಲಿ ಪೋಸ್ಟ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜನವರಿ 15, 2022 ಸಂಜೆ 5 ಗಂಟೆ ಆಗಿದೆ.
ಖಾಲಿ ಇರುವ ಒಟ್ಟು 97 ಹುದ್ದೆಗಳಲ್ಲಿ ಅತಿ ಹೆಚ್ಚು 89 ಹುದ್ದೆಗಳು ಉಪ ವಿಭಾಗಾಧಿಕಾರಿ ಗ್ರೇಡ್-2 ಆಗಿವೆ. ಕಿರಿಯ ಹಿಂದಿ ಅನುವಾದಕ 7 ಹುದ್ದೆಗಳಿವೆ. ಹಿಂದಿ ಟೈಪಿಸ್ಟ್ ಕೇವಲ 1 ಹುದ್ದೆಯಿದೆ. ಇನ್ನು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ.
ಅಗತ್ಯ ಶೈಕ್ಷಣಿಕ ಅರ್ಹತೆಗಳು ಮತ್ತು ಅನುಭವ..!
* ಉಪ ವಿಭಾಗಾಧಿಕಾರಿ ಗ್ರೇಡ್- 2 – 10ನೇ ತರಗತಿ ತೇರ್ಗಡೆ ಮತ್ತು ಸರ್ವೇಯಿಂಗ್ ಅಥವಾ ಡ್ರಾಫ್ಟ್ಸ್ ಮನ್ (ಸಿವಿಲ್) ನಲ್ಲಿ ಕನಿಷ್ಠ 2 ವರ್ಷಗಳ ಡಿಪ್ಲೊಮಾ/ಪ್ರಮಾಣಪತ್ರ.
ಹಿಂದಿ ಟೈಪಿಸ್ಟ್ – ಟೈಪಿಂಗ್ʼನಲ್ಲಿ ನಿಮಿಷಕ್ಕೆ ಕನಿಷ್ಠ 25 ಪದಗಳ ವೇಗ, 10ನೇ ತರಗತಿ ಪಾಸ್ ಆಗಿರಬೇಕು.
ವಯಸ್ಸಿನ ಮಿತಿ
ಜೂನಿಯರ್ ಹಿಂದಿ ಅನುವಾದಕ – 18 ರಿಂದ 30 ವರ್ಷಗಳು
ಉಪ ವಿಭಾಗಾಧಿಕಾರಿ ಗ್ರೇಡ್ 2 – 18 ರಿಂದ 27 ವರ್ಷಗಳು
ಹಿಂದಿ ಟೈಪಿಸ್ಟ್ – 18 ರಿಂದ 27 ವರ್ಷಗಳು
ಅರ್ಜಿ ನಮೂನೆಯನ್ನು ಈ ವಿಳಾಸಕ್ಕೆ ಕಳುಹಿಸಬೇಕು
“ಆರ್ಡಿನರಿ ಪೋಸ್ಟ್” “ಜೂನಿಯರ್ ಹಿಂದಿ ಟ್ರಾನ್ಸ್ ಲೇಟರ್ /ಡೈರೆಕ್ಟರ್” ಮೂಲಕ ಉಪ ವಿಭಾಗಾಧಿಕಾರಿ, ಗ್ರೇಡ್-11/11 ಹಿಂದಿ ಟೈಪಿಸ್ಟ್ ಹುದ್ದೆಗೆ, ಈ ಅರ್ಜಿಯನ್ನ ʼಸದರ್ನ್ ಕಮಾಂಡ್, ಇಸಿಎಚ್ಎಸ್ ಪಾಲಿಕ್ಲಿನಿಕ್, ಕೊಂಡ್ವಾ ರಸ್ತೆ, ಪುಣೆ (ಮಹಾರಾಷ್ಟ್ರ)-411040 ವಿಳಾಸʼಕ್ಕೆ ಕಳುಹಿಸಿ.
ʼAadhar Cardʼನಲ್ಲಿರುವ ʼಈ ಎರಡು ಮಾಹಿತಿʼ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಬದಲಾಯಿಸೋಕೆ ಸಾಧ್ಯ..! ಯಾಕೆ ಗೊತ್ತಾ?
BIGG NEWS : ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ವಿಳಂಬ : ಹೈಕೋರ್ಟ್ ಮೆಟ್ಟಿಲೇರಿದ ‘ಚುನಾವಣಾ ಆಯೋಗ’
GOOD NEWS : SSLC, PUC, DEGREE ಪಾಸಾದ ಯುವಕ, ಯುವತಿಯರಿಗೆ ಇಲ್ಲಿದೆ ಸಿಹಿಸುದ್ದಿ