ನವದೆಹಲಿ : ನೀವು ಮೊದಲ ಹಂತದಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಅಡಿಯಲ್ಲಿ ಜನ್ ಧನ್ ಖಾತೆಯನ್ನ ತೆರೆಯಲು ಸಾಧ್ಯವಾಗದಿದ್ರೆ, ಈಗ ನೀವು ನಿಮ್ಮ ಜನ್ ಧನ್ ಖಾತೆಯನ್ನ ಶೀಘ್ರದಲ್ಲೇ ತೆರೆಯಬಹುದು. ಯಾಕಂದ್ರೆ, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಯ ಎರಡನೇ ಹಂತವನ್ನ ಶೀಘ್ರದಲ್ಲೇ ಪ್ರಾರಂಭಿಸಲಿದೆ. ಸರ್ಕಾರವು ಪ್ರಧಾನ ಮಂತ್ರಿ ಜನ್ ಧನ್ ಯೋಜನೆ 2.0 ಮೇಲೆ ಕೇಂದ್ರೀಕರಿಸುತ್ತಿದೆ.

ಬ್ಯಾಂಕ್ ಗ್ರಾಹಕರನ್ನ ಹಣಕಾಸಿನ ಸ್ವತ್ತುಗಳೊಂದಿಗೆ ಸಂಪರ್ಕಿಸಲು, ಬ್ಯಾಂಕುಗಳು ಜನ್ ಧನ್ ಗ್ರಾಹಕರಿಗಾಗಿ ವಿಶೇಷ ಯೋಜನೆಯೊಂದಿಗೆ ಬರಬಹುದು. ಇದಕ್ಕಾಗಿ ಸೆಬಿ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಆ ಬಳಿಕವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಮೊದಲ ಹಂತದಲ್ಲಿ 47 ಕೋಟಿಗೂ ಹೆಚ್ಚು ಜನರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಪ್ರಸ್ತುತ ಇದರಲ್ಲಿ ರೂ.1.75 ಲಕ್ಷ ಕೋಟಿ ಜಮೆಯಾಗಿದೆ. ಈಗ ಸರ್ಕಾರವು ಜನ್ ಧನ್ ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನ ಹಣಕಾಸಿನ ಆಸ್ತಿಗಳೊಂದಿಗೆ ಲಿಂಕ್ ಮಾಡಲು ಬಯಸುತ್ತದೆ. ಇದರಿಂದ ಅವರು ಉತ್ತಮ ಆದಾಯವನ್ನ ಪಡೆಯಬಹುದು. ಸರ್ಕಾರ ಈಗ ಜನ್ ಧನ್ ಗ್ರಾಹಕರನ್ನು ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತದೆ. ಇದಕ್ಕಾಗಿ ಸರ್ಕಾರವು ಉತ್ತಮ ಮತ್ತು ಸುರಕ್ಷಿತ ಆದಾಯವನ್ನು ನೀಡುವತ್ತ ಗಮನಹರಿಸುತ್ತಿದೆ.

ನಿಶ್ಚಿತ ಠೇವಣಿ, ಮ್ಯೂಚುವಲ್ ಫಂಡ್, ಎಸ್ಐಪಿ ಮತ್ತು ಇ-ಗೋಲ್ಡ್ ಯೋಜನೆಗಳನ್ನು ಪರಿಚಯಿಸಲು ಸರ್ಕಾರ ಯೋಚಿಸುತ್ತಿದೆ. ಹೂಡಿಕೆದಾರರಿಗೆ ಆಗುವ ಸಣ್ಣ ಮೊತ್ತ ಮತ್ತು ನಷ್ಟಕ್ಕೆ ಸರಕಾರವೇ ಹೊಣೆ. ಈ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತೇವೆ. ಇದಕ್ಕಾಗಿ ಬಿಸಿನೆಸ್ ಕರೆಸ್ಪಾಂಡೆಂಟ್ ಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ಜನ್ ಧನ್ ಗ್ರಾಹಕರಿಗೆ ಹೂಡಿಕೆ ಅವಕಾಶಗಳ ಕುರಿತು ಜಾಗೃತಿ ಅಭಿಯಾನ ನಡೆಸಲಿದ್ದಾರೆ.

ಸೆಬಿ ಮತ್ತು ಆರ್ಬಿಐ ನಡುವೆ ಚರ್ಚೆ ನಡೆಯುತ್ತಿದೆ. ಸರ್ಕಾರದ ಹಣಕಾಸು ಸೇವೆಗಳ ಇಲಾಖೆ, ಸೆಬಿ ಮತ್ತು ಆರ್ಬಿಐ 1.75 ಲಕ್ಷ ಕೋಟಿ ರೂಪಾಯಿಗಳನ್ನು ಹಣಕಾಸು ಆಸ್ತಿಗಳಿಗೆ ಹೇಗೆ ಜೋಡಿಸುವುದು ಎನ್ನುವ ಕುರಿತು ಚರ್ಚೆಯಲ್ಲಿದೆ.

 

ಭಾರತ ಸ್ವಾವಲಂಬಿಯಾಗಲುಮಹಿಳೆಯರ ಭಾಗವಹಿಸುವಿಕೆ ಅತ್ಯಗತ್ಯ : ರಾಷ್ಟ್ರಪತಿ ದ್ರೌಪದಿ ಮುರ್ಮು

BIGG NEWS : ಭಾರತಕ್ಕೆ ಐತಿಹಾಸಿಕ ದಿನ ; ‘ವಿಶ್ವ ಶಕ್ತಿ’ಯಾಗೋ ಹಾದಿಯಲ್ಲಿ ಇಂಡಿಯಾ, ಜಿ-20 ಅಧ್ಯಕ್ಷ ಸ್ಥಾನ ಹಸ್ತಾಂತರ |India becomes G20 President

Winter Skin Care: ಚಳಿಗಾಲದಲ್ಲಿ ‘ಚರ್ಮದ ಕಪ್ಪ’ನ್ನು ಹೋಗಲಾಡಿಸಲು ಈ ಮನೆಮದ್ದುಗಳು ಪರಿಣಾಮಕಾರಿ, ಒಮ್ಮೆ ಟ್ರೈ ಮಾಡಿ ನೋಡಿ

Share.
Exit mobile version