ನವದೆಹಲಿ : ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ (Rashtriya Chemicals and Fertilizers Limited) ವಿವಿಧ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆಯಾಗಿದೆ. ಟ್ರೇಡ್, ಟೆಕ್ನಿಷಿಯನ್, ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳನ್ನ ಭರ್ತಿ ಮಾಡಲು ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಒಟ್ಟು 396 ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಅದ್ರಂತೆ, ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನ ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 14 ಆಗಿದೆ. ಅರ್ಹತೆ ಮತ್ತು ಪೋಸ್ಟ್ ವಿವರಗಳಿಗಾಗಿ ಮುಂದೆ ಓದಿ.

ಈ ಹುದ್ದೆಗಳನ್ನು ತಾತ್ಕಾಲಿಕವಾಗಿ (ಗುತ್ತಿಗೆ ಆಧಾರದ ಮೇಲೆ) ನೇಮಕ ಮಾಡಲಾಗುವುದು. ಇನ್ನು ಮುಂಬೈನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಕಂಪನಿ ಹೆಸರು : ರಾಷ್ಟ್ರೀಯ ಕೆಮಿಕಲ್ಸ್ & ಫರ್ಟಿಲೈಸರ್ಸ್ (RCF)

ಉದ್ಯೋಗದ ಹೆಸರು : ಪದವೀಧರ ಮತ್ತು ತಂತ್ರಜ್ಞ ಅಪ್ರೆಂಟಿಸ್

ಹುದ್ದೆಗಳ ಸಂಖ್ಯೆ: 396

ವಿದ್ಯಾರ್ಹತೆ : ದ್ವಿತೀಯ ಪಿಯುಸಿ, ಡಿಗ್ರಿ ಮಾಡಿರಬೇಕು. ಇನ್ನು ಕೆಲವು ಹುದ್ದೆಗಳಿಗೆ ಸಂಬಂಧಿಸಿದ ವಿಭಾಗದಲ್ಲಿ ಪದವಿ ಡಿಪ್ಲೊಮಾ, ಐಟಿಐ ಮಾಡಿರಬೇಕು.

ಉದ್ಯೋಗ ಸ್ಥಳ: ರಾಯಗಡ – ಮುಂಬೈ

ಸ್ಟೈಪೆಂಡ್: ತಿಂಗಳಿಗೆ ರೂ.5,000-9,000.

ವಯಸ್ಸಿನ ಮಿತಿ: ರಾಷ್ಟ್ರೀಯ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ನೇಮಕಾತಿ ಅಧಿಸೂಚನೆಯ ಪ್ರಕಾರ ನೀಡಲಾಗುವುದು.

ವಯೋಮಿತಿ ಸಡಿಲಿಕೆ : ಅಭ್ಯರ್ಥಿಯ ಗರಿಷ್ಠ ವಯಸ್ಸು 25 ವರ್ಷಗಳನ್ನ ಮೀರಬಾರದು. ಇನ್ನು OBC ಅಭ್ಯರ್ಥಿಗಳಿಗೆ 03 ವರ್ಷಗಳು, SC, ST ಅಭ್ಯರ್ಥಿಗಳಿಗೆ 05 ವರ್ಷಗಳು ಮತ್ತು PwD ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ : ಆನ್‌ಲೈನ್

ಅರ್ಜಿ ಶುಲ್ಕ : ಇಲ್ಲ

ಆಯ್ಕೆ ಪ್ರಕ್ರಿಯೆ : ಮೆರಿಟ್ ಪಟ್ಟಿಯನ್ನ ಆಧರಿಸಿ, ದಾಖಲೆ ಪರಿಶೀಲನೆ ಮಾಡಲಾಗುವುದು.

ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30 ಜುಲೈ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಆಗಸ್ಟ್ 2022

– ಅಧಿಕೃತ ಜಾಲತಾಣ : rcfltd.com

ಈ ರೀತಿ ಅರ್ಜಿ ಸಲ್ಲಿಸಿ..!

– ಅಧಿಸೂಚನೆಯನ್ನ ಸಂಪೂರ್ಣವಾಗಿ ಓದಿ.. ನೀವು ಅರ್ಹತಾ ಮಾನದಂಡಗಳನ್ನ ಪೂರೈಸಿದ್ದರೇ ಅರ್ಜಿ ಸಲ್ಲಿಸಬಹುದು.

– www.rcfltd.com ಲಿಂಕ್ ಅನ್ನು ಕ್ಲಿಕ್ ಮಾಡಿ.. ಮತ್ತು ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ನೀಡಲಾದ ವಿವರಗಳನ್ನು ಭರ್ತಿ ಮಾಡಿ.

– ಇಮೇಲ್ ಐಡಿ ಮತ್ತು ಸಂವಹನ ಉದ್ದೇಶಕ್ಕಾಗಿಮೊಬೈಲ್‌ ಸಂಖ್ಯೆ ನೀಡಬೇಕು.

– ಎಲ್ಲಾ ಮಾಹಿತಿಯನ್ನ ಪೂರ್ಣಗೊಳಿಸಿದ ನಂತ್ರ ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ, ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಿ.

– ಅಂತಿಮವಾಗಿ ಅಪ್ಲಿಕೇಶನ್‌ನ ಪ್ರಿಂಟ್ಔಟ್ ತೆಗೆದುಕೊಳ್ಳಿ.

Share.
Exit mobile version