ಬೆಂಗಳೂರು: ಭೂ ಮಾಲೀಕರು ಮೃತರಾದ ನಂತ್ರ, ಅವರ ದಾಖಲೆಗಳನ್ನು ವಾರಸುದಾರರುಗಳಿಗೆ ವರ್ಗಾವಣೆ ಸಂಬಂಧ ಉಂಟಾಗುತ್ತಿದ್ದಂತ ಸಮಸ್ಯೆ ಸರಿಪಡಿಸಲು ಕಂದಾಯ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಪೌತಿಖಾತೆ ಸಮಸ್ಯೆಗೆ ಇತಿಶ್ರಿ ಹಾಡೋದಕ್ಕೆ ಮುಂದಾಗಿದ್ದು, ಇದಕ್ಕಾಗಿ ಜುಲೈ.16ರಿಂದ ಕಂದಾಯ ಇಲಾಖೆಯಿಂದ ಆಂದೋಲ ನಡೆಸಲಾಗುತ್ತಿದೆ.
ಅಪಘಾತ ಪ್ರಕರಣಗಳಲ್ಲಿ ಪರಿಹಾರ ಕೋರಿ ಸಲ್ಲಿಸುವ ಅರ್ಜಿಗಳ ಜೊತೆಗಿನ ಬಿಲ್ ನೈಜತೆ ಪರಿಶೀಲನೆ MACT ಕರ್ತವ್ಯ – ಹೈಕೋರ್ಟ್
ಈ ಬಗ್ಗೆ ಮಾಹಿತಿ ನೀಡಿದಂತ ಕಂದಾಯ ಸಚಿವ ಆರ್ ಅಶೋಕ್, ಲಕ್ಷಾಂತರ ಪೌತಿ ಖಾತೆಗಳಿದ್ದು, ಖಾತೆಗಳ ವರ್ಗಾವಣೆಗಾಗಿ ಮೃತರ ವಾರಸುದಾರರು ದಿನಂಪ್ರತಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಈ ಅಲೆದಾಟವನ್ನು ತಪ್ಪಿಸೋ ನಿಟ್ಟಿನಲ್ಲಿ ಜುಲೈ.16ರಿಂದ ರಾಜ್ಯದಲ್ಲಿ ಪೌತಿ ಖಾತೆ ಆಂದೋಲನ ಆರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದರು.
OMG: ಹೀಗೂ ಉಂಟೆ..! ತೀರ್ಥದ ಜೊತೆ ಕೃಷ್ಣನ ವಿಗ್ರಹ ನುಂಗಿದ ಭೂಪ, ಮುಂದೇನಾಯ್ತು ಗೊತ್ತಾ.?
ಮೃತರ ಹೆಸರಿನಲ್ಲಿ ಖಾತೆಗಳಿದ್ದಾಗ, ಅದನ್ನು ಹಾಲಿ ವಾರಸುದಾರರಿಗೆ ವರ್ಗಾಯಿಸುವ ಕೆಲಸ ವಿಪರೀತ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆ ಸರಿಯಾಗಿ ಆಗದೇ ವರ್ಷಗಟ್ಟಲೆ ವಾರಸುದಾರರು ಕಂದಾಯ ಕಚೇರಿಗಳಿಗೆ ಅಲೆದಾಡುವಂತೆ ಆಗಿದೆ. ಯಾವುದೇ ಯೋಜನೆಯ ನೆರವನ್ನು ರೈತರು ಪಡೆಯೋದಕ್ಕೆ ಆಗ್ತಾ ಇಲ್ಲ ಎಂದರು.
ಈ ಸಮಸ್ಯೆ ಸರಿಪಡಿಸೋ ನಿಟ್ಟಿಲನಲ್ಲಿ, ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿಯೇ ಪೌತಿ ಖಾತೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಜುಲೈ 16ರಿಂದ ಕಂದಾಯ ಇಲಾಖೆಯಿಂದ ಪೌತಿ ಖಾತೆ ಆಂದೋಲನದ ಮೂಲಕ ಮೃತ ವಾರಸುದಾರರಿಗೆ ಭೂಮಿ ವರ್ಗಾವಣೆಯ ಎಲ್ಲಾ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡಿಕೊಡಲಾಗುತ್ತದೆ ಎಂದರು.