ಬೆಂಗಳೂರು: 2020-21 ಮತ್ತು 2022ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿರುವಂತ ಸರ್ಕಾರಿ ಅಧಿಕಾರಿ, ನೌಕರರಿಗೆ ಪ್ರಶಸ್ತಿಯ ಮೊತ್ತದ ಹಣವನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇದಲ್ಲದೇ 2022ನೇ ಸಾಲಿನಿಂದ ಅನ್ವಯವಾಗುವಂತೆ ಪ್ರಶಸ್ತಿಯ ಮೊತ್ತವನ್ನು 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಳ ಮಾಡಿದೆ.
ಈ ಸಂಬಂಧ ನಡವಳಿಯನ್ನು ಹೊರಡಿಸಿರುವಂತ ಸರ್ಕಾರದ ಅಧೀನ ಕಾರ್ಯದರ್ಶಿಯವರು, 2020-21 ಮತ್ತು 2022ನೇ ಸಾಲಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದ ಅಧಿಕಾರಿ, ನೌಕರರಿಗೆ ಪ್ರಶಸ್ತಿ ಮೊತ್ತ ರೂ.10,000 ಮತ್ತು 25,000ಗಳಂತೆ ಒಟ್ಟು 82,85,000ಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿ ಆದೇಶಿಸಲಾಗಿರೋದಾಗಿ ತಿಳಿಸಿದ್ದಾರೆ.
2022ನೇ ಸಾಲಿನಿಂದ ಅನ್ವಯವಾಗುವಂತೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯ ಮೊತ್ತವನ್ನು ರೂ.10,000ಗಳಿಂದ ರೂ.25,000ಗಳಿಗೆ ಹೆಚ್ಚಿಸಿ ಆದೇಶಿಲಾಗಿದೆ. ದಿನಾಂಕ 06-02-2023ರ ಆದೇಶದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಮೊತ್ತದ ಬಿಡುಗಡೆಗೆ ಅನುದಾನ ಕೊರತೆ ಇದ್ದ ಕಾರಮ, ಈ ಮೊತ್ತವನ್ನು ಲೆಕ್ಕ ಶೀರ್ಷಿಕೆ 2052-00-090-0-25-059ರಿಂದ ಪುನರ್ ವಿನಿಯೋಗ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.