ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 2023-24 ನೇ ಸಾಲಿನಲ್ಲಿ 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಪ್ಯಾಕೇಜ್‌ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.

ಅರ್ಜಿ ಸಲ್ಲಿಕೆ

ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು. ಸ್ವೀಕೃತವಾದ ಅರ್ಹ ಅರ್ಜಿಗಳ ಜೇಷ್ಠತೆಯನ್ವಯ ಹಾಗೂ ಹೋಬಳಿಗೆ ನಿಗದಿಪಡಿಸಿದ ಗುರಿಗಳನ್ವಯ ಕಾರ್ಯಕ್ರಮ ಅನುಷ್ಠಾನಗೊಳಿಸುವುದು

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ರೈತರ ಅರ್ಜಿ

ರೈತರ ಭಾವಚಿತ್ರ

FID (FID ಇಲ್ಲವಾದಲ್ಲಿ ಆಧಾರ್‌ ಪ್ರತಿ, ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್‌ ಪಾಸ್‌ ಬುಕ್ ಪ್ರತಿ)

ಕೃಷಿ ಭಾಗ್ಯ ಪ್ಯಾಕೇಜ್‌ ನಲ್ಲಿ ಈ ಕೆಳಕಂಡ ಘಟಕಗಳು ಒಳಗೊಂಡಿದೆ

ಕ್ಷೇತ್ರ ಬದು ನಿರ್ಮಾಣ

ರೈತರ ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಪೋಲಾಗದಂತೆ ಅದೇ ಜಮೀನಿನಲ್ಲಿ ಇಂಗಿಸಲು ಹಾಗೂ ಕೃಷಿ ಹೊಂಡದಲ್ಲಿ ಸಂಗ್ರಹಿಸಲು ಕ್ಷೇತ್ರ ಬದು ನಿರ್ಮಾಣ.

ಕೃಷಿ ಹೊಂಡ

ಎಲ್ಲಾ ರೀತಿಯ ಮಣ್ಣುಗಳಲ್ಲಿ ಮಳೆ ನೀರು ಸಂಗ್ರಹಣೆಗಾಗಿ ವಿವಿಧ ಅಳತೆಯ (10x10x3 ಮೀ, 12x12x3 2, 15x15x3, 18x18x3 21x21x3 ಮೀ) ಕೃಷಿ ಹೊಂಡಗಳ ನಿರ್ಮಾಣ.

ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Fencing)

ಕೃಷಿ ಹೊಂಡದಲ್ಲಿ ಆಕಸ್ಮಿಕ ಅವಘಡಗಳು/ ಪ್ರಾಣ ಹಾನಿ ಸಂಭವಿಸದಂತೆ ತಡೆಯಲು ಕಡ್ಡಾಯವಾಗಿ ತಂತಿ ಬೇಲಿ ನಿರ್ಮಾಣ.

ಕೃಷಿ ಹೊಂಡದಿಂದ ನೀರು ಎತ್ತಲು ಪಂಪ್ ಸೆಟ್

ಕೃಷಿ ಹೊಂಡದಲ್ಲಿ ಸ೦ಗ್ರಹಣೆಯಾದ ನೀರನ್ನು ಬೆಳೆಗಳಿಗೆ ಬಳಸಿಕೊಳ್ಳಲು ಡೀಸೆಲ್ /ಪೆಟ್ರೋಲ್/ ಸೋಲಾರ್ ಪಂಪ್ ಸೆಟ್ ಖರೀದಿಸಲು ಅವಕಾಶ

ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು/ಹನಿ) ನೀರಾವರಿ

ಕೃಷಿ ಹೊಂಡಗಳಲ್ಲಿ ಸಂಗ್ರಹವಾದ ಮಳೆ ನೀರನ್ನು ಬೆಳೆಗಳಿಗೆ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿಗಾಗಿ ಬಳಸಿಕೊಳ್ಳಲು ಸೂಕ್ಷ್ಮ ನೀರಾವರಿ ಘಟಕ ಅನುಷ್ಠಾನ

Share.
Exit mobile version