ಬೆಂಗಳೂರು : ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿಸುದ್ದಿ ನೀಡಿದ್ದು, ಕೇಂದ್ರ ಸರ್ಕಾಋದ ಪೋಷಣ್‌ ಟ್ರ್ಯಾಕರ್‌ ನಲ್ಲಿ ದಾಖಲೆ ಅಪ್‌ ಲೋಡ್‌ ಮಾಡಲು 64 GB ಸಾಮಾರ್ಥ್ಯದ ಮೊಬೈಲ್‌ ಸೆಟ್‌ ಸರಬರಾಜು ಮಾಡಿದೆ.

ಪೌಷ್ಠಿಕಾಂಶದ ಕೊರತೆ ನೀಗಿಸುವ ಸಲುವಾಗಿ ಜಾರಿಗೆ ತಂದಿರುವ ಪೋಷಣ್‌ ಅಭಿಯಾನಕ್ಕಾಗಿ ಪೋಷನ್‌ ಟ್ರ್ಯಾಕರ್‌ ಆಯಪ್‌ ನಲ್ಲಿ ಗ್ರಾಮದ ಗರ್ಭಿಣಿಯರು, ಹಾಲುಣಿಸುವ ತಾಯಿಂದಿರು, ಆರು ವರ್ಷದೊಳಗಿನ ಮಕ್ಕಳು, ಅಂಗನವಾಡಿ ಮಕ್ಕಳ ಬೆಳಗ್ಗಿನ ಆಹಾರ, ಮಧ್ಯಾಹ್ನದ ಊಟ ಇತ್ಯಾದಿ ಪ್ರತಿದಿನ ಅಪ್ ಲೋಡ್‌ ಮಾಡಲಾಗುತ್ತದೆ.

ಪೋಷಣ್‌ ಟ್ರ್ಯಾಕರ್‌ ಅಭಿಯಾನಕ್ಕಾಗಿ ನಾಲ್ಕು ವರ್ಷಗಳ ಹಿಂದೆ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರಿಗೆ ಮೊಬೈಲ್‌ ಸೆಟ್‌ ನೀಡಲಾಗಿತ್ತು. ಆ ಕಂಪನಿಯ ಮೊಬೈಲ್‌ ಉತ್ಪಾದನೆ ಸ್ಥಗಿತಗೊಂಡಿತ್ತು. ನಂತರ ದುರಸ್ತಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ 64 GB ಸಾಮರ್ಥ್ಯದ ಮೊಬೈಲ್‌ ಸೆಟ್‌ ಸರಬರಾಜು ಮಾಡಿದೆ.

ಈ ಫೋನ್‍ಮೂಲಕ ಅಂಗನವಾಡಿ ಕಾರ್ಯಕರ್ತೆಯರು ಪೋಷಣ್ ಟ್ರ್ಯಾಕರ್ ಆಪ್ ಮೂಲಕ ಪ್ರತಿ ದಿನ ಅಂಗನವಾಡಿ ಕೇಂದ್ರದ ದೈನಂದಿನ ಚಟುವಟಿಕೆಗಳಾದ ಮಕ್ಕಳ ಹಾಜರಾತಿ, ಶಾಲಾ ಪೂರ್ವ ಶಿಕ್ಷಣ, ಹಾಗೂ ಬಿಸಿ ಊಟ ವಿತರಣೆ ಮುಂತಾದವುಗಳನ್ನು ಪೋಷಣ್ ಟ್ರ್ಯಾಕರ್ ನಲ್ಲಿ ತಪ್ಪದೇ ಅಳವಡಿಸಲು ಬೇಕು. ಹಾಗೂ ಸರ್ಕಾರದಿಂದ ನೀಡಿರುವ ಸ್ಮಾರ್ಟ್ ಫೋನ್‌ ಗಳನ್ನು ಸದ್ಬಳಕೆ ಮಾಡಿಕೊಂಡು ಇಲಾಖಾ ಮಾಹಿತಿಯನ್ನು ನಿರ್ವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.

Share.
Exit mobile version