ಬೆಂಗಳೂರು : ಕನ್ನಡದ ಹಿರಿಯ ದಿವಂಗತ ನಟ ಅಂಬರೀಷ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬರುವ ಮಾರ್ಚ್ ನಲ್ಲಿ ಅಂಬರೀಷ್’ ಸ್ಮಾರಕ ಉದ್ಘಾಟನೆ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಸಿಲಿಕಾನ್ ಸಿಟಿಯ ರಿಂಗ್ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಿ ನಂತರ ಮಾತನಾಡಿದರು.
ಇತ್ತೀಚೆಗಷ್ಟೇ ನಟ ವಿಷ್ಣುವರ್ಧನ್ ಸ್ಮಾರಕವನ್ನು ಸಿಎಂ ಬೊಮ್ಮಾಯಿ ಉದ್ಘಾಟಿಸಿದ್ದರು, ಈ ಬೆನ್ನಲ್ಲೇ ಬರುವ ಮಾರ್ಚ್ ನಲ್ಲಿ ಅಂಬರೀಷ್’ ಸ್ಮಾರಕ ಉದ್ಘಾಟನೆ ಮಾಡಲಾಗುತ್ತದೆ, ಹಾಗೆಯೇ . ರೇಸ್ ಕೋರ್ಸ್ ರಸ್ತೆಗೆ ‘ಅಂಬರೀಷ್’ ಹೆಸರು ನಾಮಕರಣ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು ಮಹಾನಗರ ಹಲವರಿಗೆ ಆಶ್ರಯ ನೀಡಿದೆ. ಬೆಂಗಳೂರು ನಗರದ ಪದ್ಮನಾಭನಗರದಲ್ಲಿ ವಾರ್ಡ್, ಆಸ್ಪತ್ರೆ , ಉದ್ಯಾನವನ ಎಲ್ಲವೂ ಬಹಳ ಚೆನ್ನಾಗಿದೆ. ಬೆಂಗಳೂರು ದೊಡ್ಡ ಪ್ರಮಾಣದಲ್ಲಿ ಅತಿ ವೇಗವಾಗಿ ಬೆಳೆಯುತ್ತಿದೆ. ಕಳೆದ ವರ್ಷ ಬೆಂಗಳೂರು ಅಭಿವೃದ್ದಿಗೆ 6 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಪದ್ಮನಾಭ ನಗರಕ್ಕೆ 3 ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದರು. ಸಾವಿನ ನಂತರವೂ ಬದುಕಿದ ವ್ಯಕ್ತಿ ಎಂದರೆ ಅದು ಪುನೀತ್ ರಾಜ್ ಕುಮಾರ್. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿದ್ದು ನನ್ನ ಭಾಗ್ಯ ಎಂದರು. ರೇಸ್ ಕೋರ್ಸ್ ರಸ್ತೆಗೆ ‘ಅಂಬರೀಷ್’ ಹೆಸರು ನಾಮಕರಣ ಮಾಡಲಾಗುತ್ತದೆ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು.
ಪದ್ಮನಾಭನಗರದ ವಾಜಪೇಯಿ ಕ್ರೀಡಾಂಗಣದಲ್ಲಿ ಪುನೀತ್ ರಸ್ತೆ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ಕುಮಾರ್, ಸಿಎಂ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್ ಮುಂತಾದವ್ರು ಭಾಗಿಯಾಗಿದ್ದಾರೆ.
BREAKING NEWS : ಮಹಿಳೆಗೆ ಹೃದಯಾಘಾತ ; ಜೋಧ್ಪುರದಲ್ಲಿ ‘ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ’, ನಂತ್ರ ಮಹಿಳೆ ಸಾವು
BREAKING NEWS : ಮಹಿಳೆಗೆ ಹೃದಯಾಘಾತ ; ಜೋಧ್ಪುರದಲ್ಲಿ ‘ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ’, ನಂತ್ರ ಮಹಿಳೆ ಸಾವು