ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಸೇವೆಗಳನ್ನ ತರುತ್ತಿದೆ. ಆದಾಗ್ಯೂ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದು ಅದ್ಭುತ ಕೊಡುಗೆಯೊಂದಿಗೆ ಬಂದಿದೆ. ಸಂಪೂರ್ಣ ವಿವರ ನೋಡೋದಾದ್ರೆ, ಯಾರಿಗಾದರೂ ಹಣದ ಅಗತ್ಯವಿದ್ದರೆ, ಅವ್ರು ಈ ಅವಕಾಶವನ್ನ ಸದುಪಯೋಗಪಡಿಸಿಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಪೂರ್ವ-ಅನುಮೋದಿತ ವೈಯಕ್ತಿಕ ಸಾಲಗಳನ್ನ ನೀಡುತ್ತಿದೆ. ಈ ಸಾಲವನ್ನ ಬ್ಯಾಂಕಿಗೆ ಹೋಗದೆಯೇ ಪಡೆಯಬಹುದು. ಇದಲ್ಲದೆ, ಹಣವು ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಬೀಳುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ವಿಶೇಷ ಸೇವೆಗಳನ್ನ ಒದಗಿಸುತ್ತಿದೆ. ಸಂಸ್ಕರಣಾ ಶುಲ್ಕ ಮನ್ನಾ ಪ್ರಯೋಜನವನ್ನು ಪಡೆಯಬಹುದು. ವೈಯಕ್ತಿಕ ಸಾಲಗಳ ಅಡಿಯಲ್ಲಿ, ಗ್ರಾಹಕರು 35 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. ಅರ್ಹರು ಈ ಸಾಲವನ್ನು ಪಡೆಯಬಹುದು.
ಪೂರ್ವ-ಅನುಮೋದಿತ ಸಾಲದ ಕೊಡುಗೆ ಸಾಲವು 8 ಲಕ್ಷ ರೂ.ವರೆಗೆ ಬರುತ್ತದೆ. ಇದಕ್ಕಾಗಿ ನೀವು ಬ್ಯಾಂಕಿಗೆ ಹೋಗಬೇಕಾಗಿಲ್ಲ. ಯೋನೊ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ನೀವು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಸಾಲದ ಹಣವನ್ನ ತಕ್ಷಣವೇ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ನೀವು ಈ ಮೊತ್ತವನ್ನು ಬಹಳ ಸುಲಭವಾಗಿ ಪಡೆಯಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದನ್ನು ಟ್ವಿಟ್ಟರ್’ನಲ್ಲಿ ತಿಳಿಸಿದೆ.
ನೀವು ಸಾಲ ಪಡೆಯಲು ಅರ್ಹರಾ ಅಥವಾ ಇಲ್ಲವೇ.? ಸಾಲ ತೆಗೆದುಕೊಳ್ಳೊದು ಹೇಗೆ.? ತಿಳಿಯಿರಿ.!
* ಎಸ್ಬಿಐ ಗ್ರಾಹಕರು ‘PAPL’ ಎಂದು ಬರೆದು, ಸ್ಪೇಸ್ ಕೊಟ್ಟು ಎಸ್ಬಿಐ ಖಾತೆಯ ಕೊನೆಯ ನಾಲ್ಕು ಅಂಕಿಗಳನ್ನ ನಮೂದಿಸಿ.
* ಈಗ ನೀವು 567676 ಸಂಖ್ಯೆಗೆ ಎಸ್ಎಂಎಸ್ ಮಾಡಿ.
* ನೀವು ಸಾಲ ಪಡೆಯಲು ಅರ್ಹರೇ, ಇಲ್ಲವೋ ಎಂಬುದನ್ನ ನಿಮಗೆ ಗೊತ್ತಾಗುತ್ತೆ.
* ನೀವು ಬಯಸಿದರೆ, ನೀವು ಅದನ್ನು ಯೋನೊ ಅಪ್ಲಿಕೇಶನ್ ಮೂಲಕವೂ ವೀಕ್ಷಿಸಬಹುದು.
* ಒಮ್ಮೆ ನೀವು ಯೋನೊ ಅಪ್ಲಿಕೇಶನ್’ಗೆ ಹೋದ ನಂತ್ರ ನೀವು ಪೂರ್ವ-ಅನುಮೋದಿತ ಸಾಲದ ಕೊಡುಗೆಯನ್ನ ಹೊಂದಿದ್ದರೆ ಕಾಣುತ್ತದೆ. ಇಲ್ಲದಿದ್ದರೆ, ಅದು ಬರುವುದಿಲ್ಲ.
* ಪೂರ್ವ-ಅನುಮೋದಿತ ಸಾಲದ ಆಫರ್ ಇದ್ದರೆ, ಇದರ ಮೇಲೆ ಕ್ಲಿಕ್ ಮಾಡಿ.
* ಎಷ್ಟು ಸಾಲದ ಅಗತ್ಯವಿದೆ ಎಂಬುದನ್ನು ನೀವು ಆಯ್ಕೆ ಮಾಡಬೇಕು.
* ನಂತರ ನೀವು ಟೆನರ್ ಆಯ್ಕೆ ಮಾಡಿ.
* ಅಮೇಲೆ ಬಡ್ಡಿದರ ಮತ್ತು ಇಎಂಐ ಪರಿಶೀಲಿಸಬೇಕು.
* ಅದರ ನಂತ್ರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿಯನ್ನ ಕಳುಹಿಸಲಾಗುತ್ತದೆ. ಅದನ್ನ ನಮೂದಿಸಿ, ಖಾತೆಗೆ ಹಣ ಸೇರುತ್ತೆ.
BIGG NEWS: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರ; ಮುನಿಯಪ್ಪ, ರಮೇಶ್ ಕುಮಾರ್ ವಿರುದ್ಧ ಕಾರ್ಯಕರ್ತರ ಆಕ್ರೋಶ