ನವದೆಹಲಿ: ಬ್ರಾಂಡೆಡ್ ಖಾದ್ಯ ತೈಲ ತಯಾರಕರು ತಾಳೆ ಎಣ್ಣೆ, ಸೂರ್ಯಕಾಂತಿ ಮತ್ತು ಸೋಯಾಬೀನ್ ತೈಲದ ಬೆಲೆಯನ್ನು ಪ್ರತಿ ಲೀಟರ್ಗೆ 15 ರೂ.ಗಳವರೆಗೆ ಕಡಿತ ಮಾಡುವುದಕ್ಕೆ ಮುಂದಾಗಿದ್ದಾವೆ ಎನ್ನಲಾಗಿದೆ. ಇನ್ನೂ ಈ ರೀತಿಯಾಗಿ ತೈಲದ ಬೆಲೆಯನ್ನು ಕಡಿಮೆ ಮಾಡಲು ಪ್ರಮುಖ ಕಾರಣವೆಂದ್ರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆಗಳು ಕಡಿಮೆಯಾಗಿದ್ದು, ಇದರ ಲಾಭವನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ ಎನ್ನಲಾಗಿದೆ.
ಅಂದ ಹಾಗೇ ತಾಳೆ ಎಣ್ಣೆ ಬೆಲೆ ಪ್ರತಿ ಲೀಟರ್ಗೆ 7-8 ರೂ., ಸೂರ್ಯಕಾಂತಿ ಎಣ್ಣೆಯ ಬೆಲೆಯನ್ನು ಪ್ರತಿ ಲೀಟರ್ಗೆ 10-15 ರೂ.ಗೆ ಹಾಗೂ ಸೋಯಾಬೀನ್ ತೈಲ ಬೆಲೆಗಳು ಪ್ರತಿ ಲೀಟರ್ಗೆ 5 ರೂ.ಗಳಷ್ಟು ಕುಸಿದಿವೆ ಎಂದು ಇಂಡಿಯನ್ ವೆಜಿಟೇಬಲ್ ಆಯಿಲ್ ಉತ್ಪಾದಕರ ಸಂಘ ಅಧ್ಯಕ್ಷರಾದ ದೇಸಾಯಿ ಹೇಳಿದ್ದಾರೆ.