ನವದೆಹಲಿ : ಬಹುತೇಕ ಎಲ್ಲರೂ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಾರೆ. ಇನ್ನು ಸರ್ಕಾರಿ ಉದ್ಯೋಗ ಪಡೆಯುವುದ್ರಲ್ಲಿ ಆ ವ್ಯಕ್ತಿಗೆ ಏನಿಲ್ಲವೆಂದ್ರು ವಯಸ್ಸು ಕನಿಷ್ಠ 25 ರಿಂದ 30 ವರ್ಷಗಳಾಗುತ್ತೆ. ಅದ್ರಂತೆ, ಸಧ್ಯ ಸರ್ಕಾರಿ ಉದ್ಯೋಗಗಳಿಗೆ ವಯೋಮಿತಿ 18 ವರ್ಷಗಳು ಎಂದು ಉಲ್ಲೇಖಿಸಲಾಗಿದೆ. ಆದ್ರೆ, ನೀವು 15ನೇ ವಯಸ್ಸಿನಲ್ಲಿಯೇ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸಬೋದು. ಹೌದು, 15ನೇ ವಯಸ್ಸಿನಲ್ಲಿ ಕೆಲಸ ಪಡೆಯುವ ಅವಕಾಶ ಸಿಗಲಿದೆ.
ಸಾಮಾನ್ಯವಾಗಿ, ರೈಲ್ವೆ ಉದ್ಯೋಗಗಳಿಗೆ ಶೈಕ್ಷಣಿಕ ಅರ್ಹತೆಯು 10ನೇ ತರಗತಿಯನ್ನ ಪೂರ್ಣಗೊಳಿಸಿರಬೇಕು. ಆದ್ರೆ, ಅವನಿಗೆ 18 ವರ್ಷ ತುಂಬಿರಬೇಕು ಎಂಬ ಷರತ್ತಿತ್ತು. ಆದಾಗ್ಯೂ, ಈಗ 10ನೇ ತರಗತಿಯಲ್ಲಿ ಉತ್ತೀರ್ಣರಾದ ಹೊಸಬರು ಚಿಕ್ಕ ವಯಸ್ಸಿನಲ್ಲಿ ಉದ್ಯೋಗ ಪ್ರಯತ್ನಗಳನ್ನ ಮಾಡುವ ಮೂಲಕ ಆರಾಮವಾಗಿ ನೆಲೆಸಬಹುದು. ಅದ್ರಂತೆ, ಸಧ್ಯ ದಕ್ಷಿಣ ಮಧ್ಯ ರೈಲ್ವೆಯಲ್ಲಿ 10ನೇ ತರಗತಿ ಉತ್ತೀರ್ಣರಾದ, 15 ವರ್ಷ ವಯಸ್ಸಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೋದು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 25,000 ರೂಪಾಯಿ ಸಂಬಳ ಸಿಗಲಿದೆ.
ಇದಲ್ಲದೇ, ಪಿಯುಸಿ ಓದಿದವ್ರಿಗೆ ಅವಕಾಶವಿದ್ದು ಸಿಆರ್ಪಿಎಫ್ ಜವಾನರ ಉದ್ಯೋಗಾವಕಾಶಗಳಿದ್ದು, ಎಸ್ಸಿ-ಎಸ್ಟಿ ವರ್ಗದೊಂದಿಗೆ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಸರ್ಕಾರದ ವೆಬ್ಸೈಟ್ ನೋಡಿ.
BREAKING NEWS : ಪ್ರಯಾಣಿಕರೇ ಗಮನಿಸಿ : ನಾಳೆ ಸಾರಿಗೆ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ
BIGG NEWS : ಪೋಷಕರಿಗೆ ಮುಖ್ಯ ಮಾಹಿತಿ : ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ