ನವದೆಹಲಿ : ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಬಂಪರ್ ಆಫರ್ ನೀಡಿದ್ದು, ಕುಳಿತಲ್ಲೇ ಒಂದು ಲಕ್ಷ ಗೆಲ್ಲುವ ಅದ್ಭುತ ಅವಕಾಶ ಲಭ್ಯವಾಗಿದೆ. ಹೌದು, ಕೇಂದ್ರ ಸರ್ಕಾರ ಸೂಪರ್ ಸ್ಪರ್ಧೆಯನ್ನ ಆಯೋಜಿಸುತ್ತಿದ್ದು, ಇದರಲ್ಲಿ ಭಾಗವಹಿಸಿ ವಿಜೇತರಾದ್ರೆ, ಉಚಿತವಾಗಿ 1 ಲಕ್ಷ ರೂಪಾಯಿ ಪಡೆಯಬೋದು.
ಹಾಗಿದ್ರೆ, ಸ್ಪರ್ಧೆ ಏನು.? ಯಾವಾಗ ನಡೆಯಲಿದೆ.? ನೀವು ಯಾವಾಗ ಹಣ ಪಡೆಯುತ್ತೀರಾ? ಅನ್ನೋ ಹಲವು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಿದ್ರೆ ಮುಂದೆ ಓದಿ.
ಅಸಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್(Mann ki Baat) ಕಾರ್ಯಕ್ರಮದ 100ನೇ ಸಂಚಿಕೆಯನ್ನು ಬಿಂಬಿಸುವ ಲೋಗೋ(Logo) ಮತ್ತು ಜಿಂಗಲ್ ರೂಪಿಸಲು ಆಲ್ ಇಂಡಿಯಾ ರೇಡಿಯೋ ಅರ್ಜಿಗಳನ್ನು ಆಹ್ವಾನಿಸಿದೆ. ಅದ್ರಂತೆ, ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾದರೆ 1 ಲಕ್ಷ ರೂಪಾಯಿ ಕೂತಲ್ಲೇ ಗಳಿಸಬೋದು.
ಕೇಂದ್ರ ಸರ್ಕಾರದ ಮೈಗವ್ ಇಂಡಿಯಾ(MyGov India) ಇತ್ತೀಚೆಗೆ ಇದನ್ನ ಘೋಷಿಸಿದ್ದು, ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ನೀವು ಒಂದು ಜಿಂಗಲ್ ಮತ್ತ ಲೋಗೋ ರಚಿಸಬೇಕು.
ನೀವು ಮಾಡುವ ಲೋಗೋ ಮತ್ತು ಜಿಂಗಲ್ ಆಕರ್ಷಕವಾಗಿದ್ರೆ, ಅಂದರೆ ಎಲ್ಲರಿಗೂ ಇಷ್ಟವಾದ್ರೆ ನೀವು 1 ಲಕ್ಷ ಬಹುಮಾನ ಗೆಲ್ಲಬಹುದು.
ಅಂದ್ಹಾಗೆ, ಇಂದು ಮನ್ ಕಿ ಬಾತ್ನ 97ನೇ ಆವೃತ್ತಿ ಪ್ರಸಾರವಾಗಲಿದೆ. ಏಪ್ರಿಲ್ 30ಕ್ಕೆ 100ನೇ ಆವೃತ್ತಿ ಪ್ರಸಾರವಾಗಲಿದ್ದು, ಇದನ್ನು ವಿಶೇಷ ರೀತಿಯಲ್ಲಿ ನಡೆಸುವ ಸಲುವಾಗಿ ಲೋಗೋ ಹಾಗೂ ಜಿಂಗಲ್ಗಳನ್ನು ರೂಪಿಸಲು ಆಲ್ ಇಂಡಿಯಾ ರೇಡಿಯೋ ಸಾರ್ವಜನಿಕರಿಗೆ ಅರ್ಜಿಗಳನ್ನ ಆಹ್ವಾನಿಸಿದೆ
ಅದ್ರಂತೆ, ಸ್ಪರ್ಧಿಗಳು ವಿನ್ಯಾಸಗೊಳಿಸಿದ ಲೋಗೋ ಮತ್ತು ಜಿಂಗಲ್ ಫೆಬ್ರವರಿ 1 ಅಂದ್ರೆ ಕೊನೆಯ ದಿನಾಂಕದೊಳಗೆ ಕಳಿಸಬೇಕು. ಲೋಗೋವನ್ನ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ವಿನ್ಯಾಸಗೊಳಿಸಬೇಕು ಮತ್ತು ಬಹು ಪ್ಲಾಟ್ಫಾರ್ಮ್ಗಳಿಗಾಗಿ ಬಹು ಸ್ವರೂಪಗಳಲ್ಲಿ ಮರುಪರಿಶೀಲಿಸಬೇಕು. ನಿಮ್ಗೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ರೆ, MyGov.in ಪೋರ್ಟಲ್’ಗೆ ಭೇಟಿ ನೀಡಿ.
JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ನಾಳೆ ಕಲಬುರಗಿಯಲ್ಲಿ ‘ಉದ್ಯೋಗ ಮೇಳ’ ಆಯೋಜನೆ