ನವದೆಹಲಿ : ಕೇಂದ್ರ ಸರ್ಕಾರವು ಅದ್ಭುತ ಆಫರ್ ನೀಡಿದ್ದು, ಉಚಿತವಾಗಿ 1 ಲಕ್ಷ ರೂ.ಗಳನ್ನ ಗೆಲ್ಲುವ ಅವಕಾಶ ಲಭ್ಯವಿದೆ. ಹೇಗೆ ಎಂದು ಯೋಚಿಸುತ್ತೀದ್ದೀರಾ.? ಮುಂದೆ ಓದಿ.
ಮೋದಿ ಸರ್ಕಾರವು ಮನ್ ಕಿ ಬಾತ್’ನ 100ನೇ ಸಂಚಿಕೆಗಾಗಿ ಸ್ಪರ್ಧೆಯೊಂದನ್ನ ನಡೆಸುತ್ತಿದೆ. ಸ್ಪರ್ಧೆಯ ಭಾಗವಾಗಿ, ಮನ್ ಕಿ ಬಾತ್’ನ 100ನೇ ಸಂಚಿಕೆಯನ್ನು ಬೆರಗುಗೊಳಿಸುವ ಲೋಗೋದೊಂದಿಗೆ ವಿನ್ಯಾಸಗೊಳಿಸಬೇಕಾಗುತ್ತದೆ. ಸ್ಪರ್ಧೆಯ ವಿಜೇತರಿಗೆ 1 ಲಕ್ಷ ಬಹುಮಾನವನ್ನ ನೀಡಲಾಗುವುದು.
ಈ ರೀತಿಯಾಗಿ, ನೀವು ಒಂದು ಲಕ್ಷ ಪಡೆಯಲು ಅವಕಾಶವಿದೆ. ಆದಾಗ್ಯೂ, ಸ್ಪರ್ಧೆಗೆ ಕೊನೆಯ ದಿನಾಂಕ ಫೆಬ್ರವರಿ 1 ಆಗಿದೆ. ಅಂದರೆ ಇಂದೇ ಕೊನೆಯ ದಿನವಾಗಿದ್ದು, ಆದಷ್ಟು ಬೇಗ ಅರ್ಜಿ ಸಲ್ಲಿಸಿ. ಆದ್ದರಿಂದ ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸಿದರೆ, ವಿಳಂಬ ಮಾಡಬೇಡಿ. ಈ ಅವಕಾಶವನ್ನು ತಕ್ಷಣವೇ ಬಳಸಿಕೊಳ್ಳಿ.
ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 100ನೇ ಕಂತು 2023ರ ಏಪ್ರಿಲ್ನಲ್ಲಿ ನಡೆಯಲಿದೆ. 100ನೇ ಸಂಚಿಕೆಗಾಗಿ ಈ ಸ್ಪರ್ಧೆ ನಡೆಯುತ್ತಿದೆ. ಇದರ ಭಾಗವಾಗಿ, ಕೇಂದ್ರ ಸರ್ಕಾರವು ಲೋಗೋ ವಿನ್ಯಾಸಕ್ಕಾಗಿ ಉತ್ಸಾಹಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ.
ಅತ್ಯುತ್ತಮ ಲೋಗೋವನ್ನ ವಿನ್ಯಾಸಗೊಳಿಸಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. ಅಂದ್ಹಾಗೆ, ಮನ್ ಕಿ ಬಾತ್ ಕಾರ್ಯಕ್ರಮವು ತಿಂಗಳ ಕೊನೆಯ ಭಾನುವಾರದಂದು ನಡೆಯಲಿದೆ. ಇದರ ಭಾಗವಾಗಿ, ಮೋದಿ ತಮ್ಮ ಅಭಿಪ್ರಾಯಗಳನ್ನ ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ. ಜನರನ್ನ ತಲುಪುವ ಉದ್ದೇಶದಿಂದ ಮೋದಿ ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿದ್ದಾರೆ.
BREAKING NEWS : ‘2021ರ ಗೌಪ್ಯತಾ ನೀತಿ’ ಕುರಿತು ಮಾಧ್ಯಮಗಳಲ್ಲಿ ಪ್ರಚಾರ ಮಾಡಿ ; ವಾಟ್ಸಾಪ್’ಗೆ ‘ಸುಪ್ರೀಂ’ ಸೂಚನೆ
Health Tips : ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಸಿಗಲಿವೆ ಈ ಆರೋಗ್ಯ ಲಾಭಗಳು
BREAKING NEWS : ದಕ್ಷಿಣ ಫಿಲಿಪೈನ್ಸ್ ನಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ | Earthquake hits Philippines