ನವದೆಹಲಿ : ಬೆಂಗಳೂರು ಮತ್ತು ಚೆನ್ನೈ ನಡುವಿನ ಹೊಸ ಎಕ್ಸ್ಪ್ರೆಸ್ವೇ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನ ಎರಡು ಗಂಟೆಗಳಿಗೆ ಇಳಿಸುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬುಧವಾರ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಸಚಿವರು ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಬಗ್ಗೆ ಪ್ರಸ್ತಾಪಿಸಿದರು.

ಮುಂದಿನ ಮೂರು ವರ್ಷಗಳಲ್ಲಿ ಭಾರತವು 26 ಹೊಸ ಹಸಿರು ಎಕ್ಸ್ಪ್ರೆಸ್ವೇಗಳನ್ನ ಹೊಂದಲಿದೆ ಮತ್ತು ಇದು ರಸ್ತೆ ಮಾರ್ಗಗಳನ್ನ ಆಯ್ಕೆ ಮಾಡುವ ಜನರ ಪ್ರಯಾಣದ ಸಮಯವನ್ನ ಕಡಿಮೆ ಮಾಡುತ್ತದೆ ಎಂದು ಸಚಿವರು ಹೇಳಿದರು. ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಅವುಗಳಲ್ಲಿ ಒಂದಾಗಿದೆ ಮತ್ತು ಇದು ಪ್ರಯಾಣಿಕರು ತಮ್ಮ ನಗರಗಳನ್ನ (ಚೆನ್ನೈ ಅಥವಾ ಬೆಂಗಳೂರು) ಕೇವಲ ಎರಡು ಗಂಟೆಗಳಲ್ಲಿ ತಲುಪಲು ಸಹಾಯ ಮಾಡುತ್ತದೆ. ಭವಿಷ್ಯದಲ್ಲಿ ನಮ್ಮ ರಸ್ತೆಗಳು ಅಮೆರಿಕದ ರಸ್ತೆಗಳಿಗಿಂತ ಕಡಿಮೆಯಿಲ್ಲ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ” ಎಂದರು.

ಮೇ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವ್ರು ತಮ್ಮ ಭಾಷಣದಲ್ಲಿ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ವೇ ಬಗ್ಗೆ ಪ್ರಸ್ತಾಪಿಸಿದ್ದರು. “ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಬೆಳವಣಿಗೆಯ ಎರಡು ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಚೆನ್ನೈ ಬಂದರನ್ನು ಮಧುರವೋಯಲ್ಗೆ ಸಂಪರ್ಕಿಸುವ ಚತುಷ್ಪಥ ಎಲಿವೇಟೆಡ್ ರಸ್ತೆ ಚೆನ್ನೈ ಬಂದರನ್ನು ಹೆಚ್ಚು ದಕ್ಷಗೊಳಿಸುತ್ತದೆ ಮತ್ತು ನಗರದ ಸಂಚಾರ ದಟ್ಟಣೆಯನ್ನ ಕಡಿಮೆ ಮಾಡುತ್ತದೆ” ಎಂದು ಹೇಳಿದ್ದರು.

Share.
Exit mobile version