ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ ಹೂಡಿಕೆ ಮಿತಿಯನ್ನ ಹೆಚ್ಚಿಸಲಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಮತ್ತು ಈಗಾಗಲೇ ಸೇರ್ಪಡೆಗೊಂಡವರಿಗೆ ಇದು ನೆಮ್ಮದಿಯ ನಿಟ್ಟುಸಿರು ನೀಡುತ್ತದೆ.
ಇದಲ್ಲದೆ, ಇತ್ತೀಚಿನ ಬಜೆಟ್ನಲ್ಲಿ ಸರ್ಕಾರ ಮಹಿಳೆಯರಿಗೆ ಭಾರಿ ಕೊಡುಗೆ ನೀಡಿದೆ. ಅವರಿಗಾಗಿ ವಿಶೇಷ ಯೋಜನೆ ತರಲಾಗಿದೆ. ಉಳಿತಾಯ ಪ್ರಮಾಣಪತ್ರ ಯೋಜನೆಯನ್ನ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಬಡ್ಡಿ ದರವು 7.5 ಪ್ರತಿಶತವಾಗಿದೆ. ಅಲ್ಲದೆ, ಈ ಯೋಜನೆಗೆ ಸೇರಿದವರು ಅರ್ಧದಷ್ಟು ತಲುಪಿದ ನಂತ್ರ ಹಿಂತೆಗೆದುಕೊಳ್ಳುವ ಸೌಲಭ್ಯವನ್ನ ಸಹ ಪಡೆಯಬಹುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದ್ರಲ್ಲಿ ಗರಿಷ್ಠ 2 ಲಕ್ಷದವರೆಗೆ ಹಣ ಠೇವಣಿ ಇಡಬೋದು. ಇನ್ನು ಈ ಯೋಜನೆಯು ಎರಡು ವರ್ಷಗಳವರೆಗೆ ಲಭ್ಯವಿದೆ.
ಕೇಂದ್ರ ಸರ್ಕಾರವೂ ಬಜೆಟ್’ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಕೃಷಿ ವೇಗವರ್ಧಕ ನಿಧಿಯ ರಚನೆಯನ್ನು ಘೋಷಿಸಲಾಗಿದೆ. ಕೃಷಿ ಸ್ಟಾರ್ಟಪ್ಗಳನ್ನ ಉತ್ತೇಜಿಸಲು ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಯುವ ಉದ್ಯಮಿಗಳನ್ನ ಪ್ರೋತ್ಸಾಹಿಸಲು ಈ ನಿಧಿ ಆರಂಭಿಸಲಾಗುತ್ತಿದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ಅಗ್ರಿ ಸ್ಟಾರ್ಟ್ಅಪ್ಗಳನ್ನ ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.