ನವದೆಹಲಿ: ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ವಿರಾಟ್ ಕೋಹ್ಲಿ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ತಮ್ಮ ಟ್ವಿಟರ್ ಪೇಜ್‌ನಲ್ಲಿ ಅಧಿಕೃತವಾಗಿ ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರು ಭಾರತೀಯ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಶನಿವಾರ ಘೋಷಿಸಿದ್ದಾರೆ.
ನಾನು ಕೆಲಸವನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಮಾಡಿದ್ದೇನೆ ತಂಡವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಇದು 7 ವರ್ಷಗಳ ಕಠಿಣ ಪರಿಶ್ರಮ ಪಟ್ಟಿರುವೆ. ನಾನು ಮಾಡುವ ಪ್ರತಿಯೊಂದರಲ್ಲೂ ನನ್ನ 120 ಪ್ರತಿಶತವನ್ನು ನೀಡಲು ನಾನು ಯಾವಾಗಲೂ ನಂಬಿದ್ದೇನೆ ಮತ್ತು ನಾನು ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಅದು ಸರಿಯಾದ ಕೆಲಸವಲ್ಲ ಎಂದು ನನಗೆ ತಿಳಿದಿದೆ. ನನ್ನ ಹೃದಯದಲ್ಲಿ ಸಂಪೂರ್ಣ ಸ್ಪಷ್ಟತೆ ಇದೆ ಮತ್ತು ನನ್ನ ತಂಡಕ್ಕೆ ನಾನು ಅಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ ಎಂದು ಕೊಹ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಷ್ಟು ದೀರ್ಘಾವಧಿಯವರೆಗೆ ನನ್ನ ದೇಶವನ್ನು ಮುನ್ನಡೆಸಲು ನನಗೆ ಅವಕಾಶ ನೀಡಿದ ಬಿಸಿಸಿಐಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ನೀವು ಈ ಪ್ರಯಾಣವನ್ನು ಸ್ಮರಣೀಯ ಮತ್ತು ಸುಂದರಗೊಳಿಸಿದ್ದೀರಿ. ಈ ದೃಷ್ಟಿಗೆ ಜೀವ ತುಂಬುವಲ್ಲಿ ನೀವೆಲ್ಲರೂ ದೊಡ್ಡ ಪಾತ್ರವನ್ನು ವಹಿಸಿದ್ದೀರಿ. ಕೊನೆಯದಾಗಿ , ನಾಯಕನಾಗಿ ನನ್ನನ್ನು ನಂಬಿದ ಎಂಎಸ್ ಧೋನಿಗೆ ದೊಡ್ಡ ಧನ್ಯವಾದ ಅಂತ ಅವರು ಬರೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯಗಳ ವಿವರ ಹೀಗಿದೆ: ODI- 18 ಆಗಸ್ಟ್ 2008 ರಂದು ಶ್ರೀಲಂಕಾ ವಿರುದ್ಧ ದಂಬುಲ್ಲಾದಲ್ಲಿ
ಟೆಸ್ಟ್- 20 ಜೂನ್ 2011 ಕಿಂಗ್ಸ್ಟನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ
T20 – 12 ಜೂನ್ 2010 ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ
— Virat Kohli (@imVkohli) January 15, 2022