ಸುಭಾಷಿತ :

Tuesday, February 18 , 2020 1:49 PM

ಮುಗಿಯದ ಯುದ್ದದ ಕಥೆ ಹೇಳೋ ಗೋದ್ರಾ ಟೀಸರ್.. ಏನ್ ಹೇಳ್ತಿದೆ  ಗೊತ್ತಾ ‘ಗೋದ್ರಾ’  ಟೀಸರ್


Saturday, January 18th, 2020 12:10 pm

ಸಿನಿಮಾಡೆಸ್ಕ್: ಟೈಟಲ್  ಹಾಗು ಪೋಸ್ಟರ್ ಮೂಲಕವೇ ಗಾಂಧಿನಗರದಲ್ಲಿ ಸದ್ದು ಮಾಡ್ತಿದ್ದ ಅಭಿನಯ ಚತುರ ,ನೀನಾಸಂ ಸತೀಶ್ ಅಭಿನಯದ ಗೋದ್ರಾ ಚಿತ್ರದ ಮೋಷನ್ ಪೋಸ್ಟರ್ ಮೊನ್ನೆ ಯಷ್ಟೇ ರಿಲೀಸ್ ಆಗಿ ಸದ್ದು ಮಾಡಿತ್ತು.  ಮೋಷನ್ ಪೋಸ್ಟರ್ ನಲ್ಲಿ ಕೇವಲ ಪಾತ್ರಗಳ ಪರಿಚಯ ಮಾತ್ರ ನೋಡಿ ತಲೆಯಲ್ಲಿ ಹುಳಬಿಟ್ಕೊಂಡು ಏನಪ್ಪಾ ಈ ಗೋದ್ರಾ ಅಂತಿದ್ದ ಸಿನಿಅಭಿಮಾನಿಗಳಿಗೆ ನಿನ್ನೆ ಟೀಸರ್ ಜಲಕ್ ತೋರಿಸಿದೆ ಚಿತ್ರತಂಡ.

ನಂದೀಶ್ ಆಕ್ಷನ್ ಕಟ್ನಲ್ಲಿ ಮೂಡಿಬರ್ತಿರೋ ಗೋದ್ರಾ ಸಿನಿಮಾ ಸತ್ಯ ಕಥೆಯಾಧರಿತ ಚಿತ್ರವಂತೆ.ಟೀಸರ್ ನಲ್ಲಿ ಪ್ರೀತಿ,ಸ್ನೇಹ,ಸೇಡು ಎಲ್ಲಾ ಶೇಡ್ ಗಳ ಅನಾವರಣವಿದ್ದು ಕ್ರಾಂತಿಕಾರಿಯಾಗಿ ನಿನಾಸಂ ಸತೀಶ್ ಕಾಣಿಸಿಕೊಂಡಿದ್ದಾರೆ.  ಶ್ರದ್ಧಾ ಶ್ರೀನಾಥ್ ಅವರನ್ನ ಹೋಮ್ಲಿ ಗರ್ಲ್ ಆಗಿ ತೋರಿಸಿದಂತಿದ್ದು,ಪೈಲೇಟ್ ಆಗಿ ವಸಿಷ್ಠ ಸಿಂಹ,ರಾಜಕಾರಣಿ ಯಾಗಿ ಅಚ್ಯುತ್ ಕುಮಾರ್ ಗಮನಸೆಳಿತಾರೆ. ಚಿತ್ರದಲ್ಲಿ ನಕ್ಸಲೈಟ್ ಬ್ಯಾಗ್ರೌಂಡ್ನ ಕಥೆ ಇದ್ದು ಕಥೆಯ ತಿರುವುಗಳಿಗೆ ತಕ್ಕಂತೆ ಪಾತ್ರದ ಶೇಡ್ಗಳಿವೆಯಂತೆ.

ಗೋದ್ರಾ ಟೈಟಲ್ ನ ‘ಮುಗಿಯದ ಯುದ್ದ’ ಎಂಬ ಅಡಿಬರಹ ಕೊಂಚ ಕ್ಯೂರಿಯಾಸಿಟಿ ಹುಟ್ಟಿಸಿದ್ದು,ಗೋದ್ರಾ ಹತ್ಯಾಕಾಂಡ ಕ್ಕೂ ಈ ಸಿನ್ಮಾಗೂ ಯಾವುದೇ ಸಂಬಂಧವಿಲ್ಲ ವೆಂದ ಚಿತ್ರತಂಡ ಯಾವ ರಿಯಲ್ ಸ್ಟೋರಿನ ರೀಲ್ ನಲ್ಲಿ ಹೇಳೋಕ್ ಹೊರಟಿದೆ ಅನ್ನೋದು ಚಿತ್ರದ ರಿಲೀಸ್ ಬಳಿಕವೇ ತಿಳಿಯಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions