ಸುಭಾಷಿತ :

Monday, December 9 , 2019 2:34 PM

ದೇವರ ಬಳಿ ಬೇಡಿಕೊಂಡದರ ಬಗ್ಗೆ ಯಾರಿಗೂ ತಿಳಿಸಬೇಡಿ, ಯಾಕೆ ಗೊತ್ತೇ..?


Tuesday, November 12th, 2019 3:38 pm

ಸ್ಪೆಷಲ್‌ಡೆಸ್ಕ್: ನೀವು ದೇವಸ್ಥಾನಕ್ಕೆ ಹೋದಾಗ ಅಥವಾ ಮನೆಯಲ್ಲಿ ಪೂಜೆ ಮಾಡುವಾಗ ದೇವರ ಹತ್ತಿರ ನಾವು ನಮ್ಮ ಕೋರಿಕೆಗಳನ್ನ ಈಡೇರಿಸು ಎಂದು ಬೇಡಿಕೊಳ್ಳುತ್ತೇವೆ. ನಮ್ಮ ಬೇಡಿಕೆಗಳು ಚಿಕ್ಕದಾದರೂ ಅಥವ ದೊಡ್ಡದಾದರೂ ಬೇರೆಯವರ ಬಳಿ ಹೇಳಬಾರದು ಎನ್ನುವ ಮಾತುಗಳನ್ನು ನಾವು ಕೇಳಿದ್ದೇವೆ.
ನಾವು ದೇವರ ಬಳಿ ಬೇಡಿಕೊಳ್ಳುವ ಬೇಡಿಕೆ ಬಲಿಷ್ಠ ಹಾಗೂ ಕಷ್ಟಕರವಾಗಿರುತ್ತದೆ. ಇಂತಹ ಬೇಡಿಕೆಗಳು ಈಡೇರಿದರೆ ನಮಗೆ ಬಹಳಷ್ಟು ಸಂತೋಷವಾಗುತ್ತದೆ. ನಮ್ಮ ಬೇಡಿಕೆ ಧನ, ಸುಖ, ಒಳ್ಳೆಯ ಗಂಡ ಹೆಂಡತಿ, ಪದವಿ ಯಾವುದೇ ಆಗಿರಬಹುದು. ನಮ್ಮ ಕೋರಿಕೆಯನ್ನ ಇತರರಿಗೆ ಹೇಳಿದ್ದಲ್ಲಿ ಮೇಲು ನೋಟಕ್ಕೆ ಅವರಿಗೆ ಸಂತೋಷವಾಗಿರುವಂತೆ ಕಂಡರೂ ಒಳಗೊಳಗೇ ನಮ್ಮ ಕೋರಿಕೆ ನೆರವೇರಬಾರದು ಎಂದು ಅವರು ಹೇಳಬಹುದು.‌ ಈ ಕಾರಣಕ್ಕಾಗಿ ಯಾರಿಗೂ ನೀವು ಪ್ರಾರ್ಥಿಸಿದ ಬೇಡಿಕೆಗಳ ಬಗ್ಗೆ ಹೇಳಬಾರದು.
ಇನ್ನು ನಾವು ದೇವಾಲಯಕ್ಕೆ ಹೋದಾಗ ಜೋರಾಗಿ ನಗಬಾರದು, ಕೂಗಬಾರದು. ಸ್ವಂತ ವಿಷಯಗಳ ಕುರಿತು ಮಾತನಾಡಬಾರದು. ಜೊತೆಗೆ ದೇವಾಲಯದ ಪರಿಸರವನ್ನ ಸ್ವಚ್ಛವಾಗಿರಿಸಬೇಕು.  ಇನ್ನು ಕೆಲವರು ದೇವರ ದರ್ಶನ ಮಾಡುವಾಗ ಕಣ್ಣುಗಳನ್ನ ಮುಚ್ಚಿಕೊಂಡು ನಮಸ್ಕರಿಸುತ್ತಾರೆ. ಹೀಗೆ ಮಾಡಬಾರದು. ಕಣ್ಣುಗಳನ್ನ ತೆರೆದು ದೇವರ ದರ್ಶನವನ್ನ ಮಾಡಬೇಕು. ಇನ್ನು ತೀರ್ಥವನ್ನ ನಿಂತುಕೊಂಡೆ ಸ್ವೀಕರಿಸಬೇಕು. ಮನೆಯಲ್ಲಿ ಕುಳಿತುಕೊಡು ತೀರ್ಥವನ್ನ ಸ್ವೀಕರಿಸಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions