ಪಾಕಿಸ್ತಾನ : ವಜೀರಾಬಾದ್‌ನಲ್ಲಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್‌ ರ್ಯಾಲಿಯಲ್ಲಿ ಗುಂಡಿನ ದಾಳಿಯಲ್ಲಿ ಗಾಯಗೊಂಡ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ ಪ್ರತಿಕ್ರಿಯಿಸಿರುವ ಅವರು, ದೇವರು ತನಗೆ ಎರಡನೇ ಜೀವನವನ್ನು ನೀಡಿದ್ದಾನೆ ಎಂದು ಹೇಳಿದ್ದಾರೆ.

BIG NEWS: ಮಧ್ಯಪ್ರದೇಶದಲ್ಲಿ ಭೀಕರ ಅಪಘಾತಕ್ಕೆ 11 ಮಂದಿ ಬಲಿ: ಮೃತರಿಗೆ ಪ್ರಧಾನಿ ಮೋದಿ ಸಂತಾಪ, ₹2 ಲಕ್ಷ ಪರಿಹಾರ ಘೋಷಣೆ

ದಾಳಿಯಲ್ಲಿ ಇಮ್ರಾನ್ ಖಾನ್ ಅವರ ಎರಡೂ ಕಾಲುಗಳಿಗೆ ಬುಲೆಟ್ ತಗುಲಿ ಗಾಯಗಳಾಗಿದ್ದು, ಅವರಿಗೆ ಲಾಹೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ

ಪಿಟಿಐ ಮುಖ್ಯಸ್ಥರ ಮೇಲೆ ಗುಂಡಿನ ದಾಳಿ ನಡೆಸಿದ್ದನು, ಹಾರಿಸಿದಾಗ 70 ವರ್ಷ ವಯಸ್ಸಿನವರು ಗಾಯಗೊಂಡಿದ್ದಾರೆ. ಗುರುವಾರ (ನಿನ್ನೆ)  ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಜೀರಾಬಾದ್‌ನಲ್ಲಿ ದಟ್ಟವಾದ ಬೆಂಬಲಿಗರ ನಡುವೆ ನಿಧಾನವಾಗಿ ಚಲಿಸುತ್ತಿದ್ದ ಕಂಟೈನರ್ ಟ್ರಕ್ ಮೇಲೆ ನಿಂತಿದ್ದಾಗ ಖಾನ್ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿದ್ದನು. ತಕ್ಷಣ ಅಲ್ಲಿದ್ದ ಬೆಂಬಲಿಗರು ಆತನನ್ನು ತಡೆದಿದ್ದು, ಪೊಲೀಸರು ಬಂಧಿಸಿದ್ದಾರೆ.

ಇನ್ನು ಬಂಧಿತ ವ್ಯಕ್ತಿ ತಾನು ದಾಳಿ ಮಾಡಿರುವ ಕಾರಣ ತಿಳಿಸಿದ್ದು, ಪಾಕ್ ಪ್ರಧಾನಿ ಜನರಿಗೆ ಏನೇನೋ ಹೇಳಿ ದಾಳಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರ ಮೇಲೆ ಗುಂಡು ಹಾರಿಸಿದ್ದೇನೆ ಎಂದಿದ್ದಾನೆ.

BIGG NEWS: ಶ್ರೀ ರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ಜೀವ ಬೆದರಿಕೆ ಕರೆ; ದೂರು ದಾಖಲು| Threatening Call

Share.
Exit mobile version