ಪಣಜಿ : ಕುಡಿದವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದು ಬಾರ್ ಓನರ್ ಜವಾಬ್ದಾರಿ ಎಂದು ಸಚಿವ ಮೌವಿನ್ ಗೋಡಿನ್ಹೋ ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಈ ವಿಚಾರದ ಕುರಿತು ಕಾನೂನಾತ್ಮಕ ನಿಬಂಧನೆಗಳನ್ನು ಪರಿಶೀಲಿಸಲು ಮತ್ತು ಪರಿಣಾಮಕಾರಿ ಅನುಷ್ಟಾನಕ್ಕಾಗಿ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಗೋವಾಕ್ಕೆ ಬಹಳಷ್ಟು ಮಂದಿ ಟೂರಿಸ್ಟ್ ಬರುತ್ತಾರೆ, ಗೋವಾದಲ್ಲಿ ಡ್ರಿಂಕ್ಸ್ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಬಹಳಷ್ಟು ಮಂದಿ ಕುಡಿದು ವಾಹನ ಚಲಾಯಿಸುತ್ತಾರೆ. ಆದ್ದರಿಂದ ಗೋವಾದಲ್ಲಿ ಅಪಘಾತದ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಅಪಘಾತ ಹೆಚ್ಚಳಕ್ಕೆ ಕುಡಿದು ವಾಹನ ಚಲಾಯಿಸುವುದೇ ಪ್ರಮುಖ ಕಾರಣ ಎಂಬಅಂಶ ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಕುಡಿದು ಟೈಟಾದವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದು ಬಾರ್ ಓನರ್ ಜವಾಬ್ದಾರಿಯಾಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ.

ಒಂದು ವೇಳೆ ಗೋವಾದಲ್ಲಿ ಈ ಕಾನೂನು ಜಾರಿಗೆ ಬಂದರೆ ಬಾರ್ ಮಾಲೀಕರು ದೊಡ್ಡ ಸಂಕಷ್ಟಕ್ಕೆ ಈಡಾಗುತ್ತಾರೆ. ಬಾರ್ ಮಾಲೀಕರು ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಬಿಡಿ.. ಗೋವಾ ಭಾರತದ ಅತ್ಯಂತ ಸಣ್ಣ ರಾಜ್ಯವಾಗಿದ್ದು, ಬಹಳಷ್ಟು ಮಂದಿ ಪ್ರವಾಸಿಗರ ಫೇವರೇಟ್ ಸ್ಥಳವಾಗಿ ಬಿಟ್ಟಿದೆ. ಯುವಕ ಯುವತಿಯರು ಗೋವಾ ಬೀಚ್ ಗೆ ಬಂದು ಪಾರ್ಟಿ ಮಾಡಲು ಹಾತೊರೆಯುತ್ತಾರೆ.

BREAKING NEWS ; ಉದ್ಧವ್ ಠಾಕ್ರೆ, ಮಹಾ ಸಿಎಂ ಶಿಂಧೆ ಬಣಕ್ಕೆ ಹೊಸ ಹೆಸರು, ಚಿಹ್ನೆ ನೀಡಿದ ಚುನಾವಣಾ ಆಯೋಗ

BIGG NEWS : ಖಾಸಗಿ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಹಬ್ಬದ ಮುಂಗಡ ಮಂಜೂರು

 

Share.
Exit mobile version