ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ( Karnataka State Road Transport Corporation ) ನೂತನ ವಾಹನ ಬಸ್ ಸೇವೆಗಳನ್ನು ( KSRTC New Bus Service ) ಆರಂಭಿಸಲಾಗುತ್ತಿದೆ. ಈ ವಾಹನಗಳಿಗೆ ಬ್ರಾಂಡಿಂಗ್ ಪರಿಕಲ್ಪನೆಗೆ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ಸ್ ವಿನ್ಯಾಸವನ್ನು ಕೋರಿದೆ. ಉತ್ತಮ ನೇಮ್, ಟ್ಯಾಗ್ ಲೈನ್, ಗ್ರಾಫಿಕ್ ಮಾಡಿಕೊಟ್ಟವರಿಗೆ ರೂ.25,000ವರೆಗೆ ಬಹುಮಾನ ಸಿಗಲಿದೆ.

BIG BREAKING NEWS: ‘ಅಮರಾವತಿ ರಾಜಧಾನಿ’ಯನ್ನಾಗಿ ಅಭಿವೃದ್ಧಿಪಡಿಸುವಂತೆ ನೀಡಿದ ಆಂಧ್ರ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ | Amaravati capital

ಈ ಕುರಿತು ಕೆ ಎಸ್ ಆರ್ ಟಿ ಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಕೆ ಎಸ್ ಆರ್ ಟಿಸಿಯಿಂದ ನೂತನ ಶ್ರೇಣಿಯ ವಾಹನಗಳ ಸೇವೆಯನ್ನು ಪರಿಚಿಸಲಾಗುತ್ತಿದೆ. ಬಿಎಸ್ ವಿಐ-9600 ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ ಹಾಗೂ ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್ ಸಂಚಾರ ಪರಿಚಯಿಸಲಾಗುತ್ತಿದೆ ಎಂದಿದೆ.

BIGG NEWS: ಮೈಶುಗರ್ ಕಾರ್ಖಾನೆಯನ್ನು ಯಾವ ರೀತಿ ಮಾಡಿದರೆಂದು ಗೊತ್ತಿದೆ: ಅಶ್ವತ್ಥ್ ನಾರಾಯಣ

ನೂತನ ಶ್ರೇಣಿಯ 2 ಮಾದರಿ ಬಸ್ಸಗಳಿಗೆ ನಿಗಮವು ತಮ್ಮಿಂದ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ ವಿನ್ಯಾಸವನ್ನು ನಿರೀಕ್ಷಿಸುತ್ತಿದೆ. ಉತ್ತಮ ಟ್ಯಾಗ್ ಲೈನ್ ನೊಂದಿಗೆ ಬ್ರಾಂಡ್ ಹೆಸರನ್ನು ಸೂಚಿಸಿದವರಿಗೆ ರೂ.10,000 ನಗದು ಬಹುಮಾವನ್ನು ಹಾಗೂ ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ ರೂ.25,000 ನಗದು ಬಹುಮಾನವನವನ್ನು ನೀಡಲಾಗುತ್ತದೆ ಎಂದು ಹೇಳಿದೆ.

ರೌಡಿ ಶೀಟರ್ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿ: ಸಚಿವ ಅಶ್ವತ್ಥನಾರಾಯಣ ಹೇಳಿದ್ದೇನು ಗೊತ್ತಾ?

ಓದುಗರಾದಂತ ನೀವುಗಳು ನಿಮ್ಮ ಯೋಚನಾ ಲಹರಿಯಲ್ಲಿ, ಕೆ ಎಸ್ ಆರ್ ಟಿ ಸಿಯ ಎರಡು ಮಾದರಿಯ ಬಸ್ ಸಂಚಾರದ ಕಲ್ಪನೆಯೊಂದಿಗೆ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ ವಿನ್ಯಾಸ ನೀಡಿ 10, 25 ಸಾವಿರ ಬಹುಮಾನ ಗೆಲ್ಲಿ.

‘ಅನುದಾನಿತ ಪದವಿ ಕಾಲೇಜು’ಗಳ ‘ಪ್ರಾಂಶುಪಾಲ’ರಿಗೆ ಗುಡ್ ನ್ಯೂಸ್: ಗಳಿಕೆ ರಜೆ ಮಂಜೂರು

ಅಂದಹಾಗೇ ನೀವು ದಿನಾಂಕ 05-12-2022ರೊಳಗೆ ನಿಮ್ಮ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ ವಿನ್ಯಾಸವನ್ನು ಇ-ಮಿಂಚಂಚೆ cpro@ksrtc.org ಗೆ ಮೇಲ್ ಮಾಡಬಹುದು. ಇಲ್ಲವೇ ಟ್ವಿಟ್ಟರ್ ನಲ್ಲಿ @KSRTC_Journeys ಹಾಗೂ ಫೆಸ್ ಬುಕ್ @KSRTC.Karnatakaಗೆ ಟ್ಯಾಗ್ ಮಾಡ ತಲುಪಿಸಬಹುದಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ

Share.
Exit mobile version