ರಾಮನಗರ : ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 4 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅವರೆಲ್ಲರಿಗೂ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
PM Kisan Yojana : ‘ಪಿಎಂ ಕಿಸಾನ್ ಯೋಜನೆ’ ಹಣ ಪಡೆಯಲು, ಫಲಾನುಭವಿಗಳಿಗೆ ‘ಇ-ಕೆವೈಸಿ’ ಕಡ್ಡಾಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 4 ಲಕ್ಷ ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸರ್ಕಾರ ರಚಿಸಿರುವ ಎಲ್ಲ ತಂಡಕ್ಕೆ ಸೂಚನೆ ನೀಡಿ, ಮನೆ ಮನೆಗೆ ಕಳುಹಿಸಿ ಅರ್ಜಿ ತೆಗೆದುಕೊಳ್ಳಬೇಕು. ಶೀಘ್ರವೇ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರನೀಡಬೇಕು ಎಂದರು.
ಕೋವಿಡ್ ಪರಿಹಾರ ನೀಡುವಂತೆ ಕೋರ್ಟ್ ಆದೇಶ ಇದೆ. ಜೊತೆಗೆ ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅವರು ನುಡಿದಂತೆ ನಡೆಯಬೇಕು ಎಂದು ಹೇಳಿದ್ದಾರೆ.
ಪ್ರತಿ ವರ್ಷ ಜನವರಿ 26ರಂದೇ ʻಗಣರಾಜ್ಯೋತ್ಸವʼವನ್ನು ಏಕೆ ಆಚರಿಸುತ್ತಾರೆ? ಇದರ 12 ಆಸಕ್ತಿದಾಯಕ ವಿಷಯಗಳು ಇಲ್ಲಿವೆ…