ಬಳ್ಳಾರಿ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ , ಜೆಡಿಎಸ್ ಮೂರು ಪಕ್ಷಗಳ ಚುನಾವಣೆ ಪ್ರಚಾರದ ಕಾವು ಹೆಚ್ಚಾಗಿದೆ. ಇದೀಗ ಚುನಾವಣೆ ಹತ್ರ ಬರುತ್ತಿದ್ದಂತೆ ಕೆಲ ಜಿಲ್ಲೆಗಳಲ್ಲಿ ಮತದಾರರನ್ನು ಸೆಳೆಯಲು ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ.
ಈಗಾಗಲೇ ಮತದಾರರಿಗೆ ಕುಕ್ಕರ್, ಸೀರೆ, ಹಣವನ್ನು ಗಿಫ್ಟ್ ಆಗಿ ನೀಡಿದಾರೆ. ಇದೀಗಕೆಆರ್ಪಿಪಿ ಪಕ್ಷದಿಂದ ಮಹಿಳೆಯರಿಗೆ ಸೀರೆ, ಆಟೋ ಚಾಲಕರಿಗೆ ವಿಮಾ ಭಾಗ್ಯ ನೀಡುತ್ತಿದ್ದಾರೆ.ಹೌದು ಬಳ್ಳಾರಿಯಲ್ಲಿ ಮತದಾರರನ್ನು ಓಲೈಸುವ ಸಲುವಾಗಿ ಗಿಫ್ಟ್ ಪಾಲಿಟಿಕ್ಸ್ ಶುರುಮಾಡಿಕೊಂಡಿದ್ದಾರೆ. ಕುಕ್ಕರ್, ಮನೆ ಪಟ್ಟಾ, ಸೀರೆ, ಇನ್ಸೂರೆನ್ಸ್ ಪಾಲಸಿಗಳನ್ನ ವಿತರಣೆ ಮಾಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸಿರುವ ಗಾಲಿ ಜನಾರ್ದನ ರೆಡ್ಡಿ ನೇತೃತ್ವದ ಕೆಆರ್ಪಿಪಿ ಪಕ್ಷ ಇದೀಗ ಮತದಾರರನ್ನ ಸೆಳೆಯಲು ಹೊಸ ತಂತ್ರವನ್ನು ರೂಪಿಸಿದ್ದಾರೆ.
BIGG NEWS: ಮೈಸೂರಿನಲ್ಲಿ ಪತ್ನಿಗೆ ಗಂಡು ಮಗು ಆಗಿಲ್ಲವೆಂದು ಪತಿಯಿಂದಲೇ ಮಾರಣಾಂತಿಕ ಹಲ್ಲೆ; ಆರೋಪಿ ಅರೆಸ್ಟ್
ಬಳ್ಳಾರಿ ನಗರದಲ್ಲಿನ ಮಹಿಳಾ ಮತದಾರರನ್ನ ಸೆಳೆಯಲು ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಮಹಿಳೆಯರಿಗೆ ಉಡಿ ತುಂಬಿ ಸೀರೆ ಹಂಚಿಕೆ ಮಾಡಿದ ಬೆನ್ನಲ್ಲೆ, ಮತ್ತೊಂದು ರೀತಿ ಮತದಾರರನ್ನ ಸೆಳೆಯಲು ಮುಂದಾಗಿದ್ದಾರೆ.ಇನ್ನು ಆಟೋಗಳಿಗೆ ಇನ್ಸೂರೆನ್ಸ್ ಪಾಲಿಸಿ ಮಾಡಿಸಿ ಆಟೋ ಚಾಲಕರ ಮೂಲಕ ಪ್ರಚಾರ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 2 ಸಾವಿರ ಆಟೋಗಳಿಗೆ ವಿಮಾ ಪಾಲಿಸಿ ಮಾಡಿಸಿದ ಕೆಆರ್ಪಿಪಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಆಟೋ ಚಾಲಕರಿಗೆ ಇನ್ಸೂರೆನ್ಸ್ ಬಾಂಡ್ ವಿತರಣೆ ಮಾಡಿದ್ದಾರೆ.ನಂತರ ಮಾತನಾಡಿದ ಅವರು, ಆಟೋ ಚಾಲಕರಿಗೆ ಬಿಜೆಪಿ ಕೈ ಕೊಟ್ಟಿದೆ ಆದರೆ ಜನಾರ್ದನ ರೆಡ್ಡಿ ಕೊಟ್ಟ ಮಾತು ಪೂರ್ಣಗೊಳಿಸಲು ನಾನು ಬಂದಿದ್ದೇನೆ. ಜನಾರ್ದನ ರೆಡ್ಡಿಯವರು ಬಳ್ಳಾರಿಯ ಹುಲಿ, ಕೊಟ್ಟ ಮಾತು ಯಾವತ್ತೂ ಮೀರಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
BIG NEWS : ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಸಭೆಗೆ ಚೀನಾ ಗೈರು : ಮೂಲಗಳು | G20 Meet