ನವದೆಹಲಿ: ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಅವರು ಸೋಮವಾರ ಜಮ್ಮುವಿನಲ್ಲಿ ತಮ್ಮ ಹೊಸ ಪಕ್ಷವನ್ನು ಪ್ರಾರಂಭಿಸಿದ್ದು. ಜಮ್ಮು ಮತ್ತು ಕಾಶ್ಮೀರಾದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ತಮ್ಮ ನೂತನ ಪಾರ್ಟಿಗೆ ‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ ಎಂದು ಘೋಷಿಸಿದ್ದಾರೆ.

“ನನ್ನ ಹೊಸ ಪಕ್ಷಕ್ಕಾಗಿ ಸುಮಾರು 1,500 ಹೆಸರುಗಳನ್ನು ಉರ್ದು, ಸಂಸ್ಕೃತದಲ್ಲಿ ನಮಗೆ ಕಳುಹಿಸಲಾಯಿತು. ಹಿಂದಿ ಮತ್ತು ಉರ್ದುವಿನ ಮಿಶ್ರಣ ‘ಹಿಂದೂಸ್ತಾನಿ’. ಈ ಹೆಸರು ಪ್ರಜಾಪ್ರಭುತ್ವ, ಶಾಂತಿಯುತ ಮತ್ತು ಸ್ವತಂತ್ರವಾಗಿರಬೇಕು ಎಂದು ನಾವು ಬಯಸುತ್ತೇವೆ ಎಂದು ಗುಲಾಂ ನಬಿ ಆಜಾದ್ ಜಮ್ಮುವಿನಲ್ಲಿ ಹೇಳಿದ್ದಾರೆ. ಕಳೆದ ತಿಂಗಳು ಕಾಂಗ್ರೆಸ್ ಜೊತೆಗಿನ ತಮ್ಮ ಐದು ದಶಕಗಳಿಗೂ ಹೆಚ್ಚು ಕಾಲದ ಒಡನಾಟವನ್ನು ಕೊನೆಗೊಳಿಸಿದ ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ ಎಂಬ ಹೊಸ ಪಕ್ಷವನ್ನು ಪ್ರಾರಂಭಿಸಿದ್ದಾರೆ. 73 ವರ್ಷದ ಆಜಾದ್ ಆಗಸ್ಟ್ 26 ರಂದು ಕಾಂಗ್ರೆಸ್ ತೊರೆದ ಬಳಿಕ, ಪಕ್ಷವು “ಸಮಗ್ರವಾಗಿ ನಾಶವಾಗಿದೆ” ಎಂದು ಹೇಳಿದ್ದರು.

BIGG NEWS : ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣ : ಶಂಕಿತ ಉಗ್ರ ಸಂಪರ್ಕ ಹೊಂದಿದ್ದ ʻಗಂಗಾವತಿಯ ಶಬ್ಬೀರ್‌ ಅರೆಸ್ಟ್‌ 

BIGG NEWS : ಆದಾಯ ಮೀರಿ ಆಸ್ತಿ ಗಳಿಕೆ ಆರೋಪ : ಸಿಬಿಐ ಪ್ರಕರಣ ರದ್ದುಕೋರಿ ಹೈಕೋರ್ಟ್ ಗೆ ಡಿಕೆ ಶಿವಕುಮಾರ್ ಅರ್ಜಿ

BREAKING NEWS : ಕೊರೊನಾ ವ್ಯಾಕ್ಸಿನ್​ ‘ಫೈಝರ್’ ಸಿಇಒ ಆಲ್ಬರ್ಟ್ ಬೌರ್ಲಾಗೆ ಕೋವಿಡ್ ಪಾಸಿಟಿವ್ | Covid positive

Ghulam Nabi Azad names his new party as ‘Democratic Azad Party’

Share.
Exit mobile version