ಸುಭಾಷಿತ :

Monday, February 17 , 2020 5:13 AM

ಗಂಡು ಮಗುವಿಗೆ ತಾಯಿಯಾದ ಕುಸ್ತಿಪಟು ಗೀತಾ ಫೋಗಾಟ್


Wednesday, December 25th, 2019 12:01 pm

ನವದೆಹಲಿ : ಕುಸ್ತಿಪಟುಗಳಾದ ಗೀತಾ ಫೋಗಾಟ್ ಮತ್ತು ಪತಿ ಪವನ್ ಕುಮಾರ್ ದಂಪತಿಗಳು ತಮ್ಮ ಮೊದಲ ಮಗುವನ್ನು ಡಿಸೆಂಬರ್ 24 ರಂದು ಸ್ವಾಗತಿಸಿದರು. ಅಂದರೆ ಗೀತಾ ಫೋಗಾಟ್ ತಾಯಿಯಾಗಿದ್ದಾರೆ.

ಗೀತಾ ಫೋಗಾಟ್ ತಮ್ಮ ಪುಟ್ಟ ಕಂದಮ್ಮನೊಂದಿಗೆ ಪತಿಯ ಜೊತೆ ಆಸ್ಪತ್ರೆಯಲ್ಲಿ ತೆಗೆದ ಭಾವಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸೆಲೆಬ್ರೆಟಿಗಳು ಸೇರಿ ಲಕ್ಷಾಂತರ ಜನ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ಗೀತಾ ಫೋಗಟ್ , “ಹಲೋ ಬಾಯ್ !!ಈ ಜಗತ್ತಿಗೆ ಸ್ವಾಗತ. ಇಲ್ಲಿದ್ದಾನೆ ಅವನು. ನಾವು ಇವನನ್ನು ತುಂಬಾ ಪ್ರೀತಿಸುತ್ತಿದ್ದೇವೆ. ದಯವಿಟ್ಟು ಅವನಿಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳನ್ನು ನೀಡಿ. ಅವನು ಈಗ ನಮ್ಮ ಜೀವನವನ್ನು ಪರಿಪೂರ್ಣಗೊಳಿಸಿದ್ದಾನೆ. ಈಗಷ್ಟೇ ಜನಿಸಿದ ನಮ್ಮ ಮಗುವನ್ನು ನೋಡುವಾಗ ಉಂಟಾಗುವ ಆನಂದವನ್ನು ಹೇಳಲು ಸಾಧ್ಯವೇ ಇಲ್ಲ ಎಂದು ಬರೆದುಕೊಂಡಿದ್ದಾರೆ.

ಗೀತಾ ಫೋಗಾಟ್ ಅವರು ನವೆಂಬರ್ 20, 2016 ರಂದು ಕುಸ್ತಿಪಟು ಪವನ್ ಕುಮಾರ್ ಅವರನ್ನು ವಿವಾಹವಾಗಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions