ಕೆಎನ್ ಎನ್ ನ್ಯೂಸ್ ಡೆಸ್ಕ್ : ತುಪ್ಪ ಅಂದರೆ ಸಾಕು ಎಲ್ಲರ ಬಾಯಿಯಲ್ಲೂ ನೀರು ಬರುತ್ತದೆ. ಅದರಲ್ಲೂ ಹಳ್ಳಿಯಲ್ಲಿ ಸಿಗುವಂತಹ ಶುದ್ಧ ತುಪ್ಪ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೆಲವರು ತುಪ್ಪ ತಿನ್ನವುದಕ್ಕೆ ಹಿಂಜರಿಯುತ್ತಾರೆ.
Romantic Destinations: ಮಳೆಗಾಲದಲ್ಲಿ ನವ ಜೋಡಿಗಳು ಪ್ರವಾಸಕ್ಕೆ ಹೋಗುವ ಪ್ಲಾನ್ ಇದೀಯಾ? ಇಲ್ಲಿದೆ ಸುಂದರತಾಣಗಳು
ಯಾಕೆಂದರೆ ಸಾಕಷ್ಟು ಮಂದಿಗೆ ತುಪ್ಪ ತಿಂದರೆ ಕೊಬ್ಬಿನಾಂಶ ತುಂಬಿಕೊಳ್ಳುತ್ತದೆ ಎಂದು ತಲೆಯಲ್ಲಿ ಕುಳಿತು ಬಿಟ್ಟಿದೆ. ಆದರೆ ಅದರಿಂದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಂತಾ ತುಂಬಾ ಜನರಿಗೆ ತಿಳಿದಿಲ್ಲ. ಹೀಗಿರುವಾಗ ತುಪ್ಪ ಸೇವಿಸುವುದರಿಂದ ಆಗುವ ಪ್ರಯೋಜನೆಗಳು ಇಲ್ಲಿದೆ.
ಶಕ್ತಿ ವರ್ಧಕ: ತುಪ್ಪದಲ್ಲಿ ಇರುವ ಆರೋಗ್ಯಕರ ಕೊಬ್ಬಿನ ಅಂಶ ದೇಹಕ್ಕೆ ಪ್ರಯೋಜನಕಾರಿ ಆಗಿದೆ. ಇದನ್ನು ಲಿಮಿಟ್ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ತುಪ್ಪ ತಿನ್ನುವುದರಿಂದ ದೇಹದಲ್ಲಿ ಪೋಷಕಾಂಶಗಳು ಉತ್ತಮವಾಗಿ ಹೀರಲ್ಪಡುತ್ತದೆ.
Romantic Destinations: ಮಳೆಗಾಲದಲ್ಲಿ ನವ ಜೋಡಿಗಳು ಪ್ರವಾಸಕ್ಕೆ ಹೋಗುವ ಪ್ಲಾನ್ ಇದೀಯಾ? ಇಲ್ಲಿದೆ ಸುಂದರತಾಣಗಳು
ತ್ವಚೆಯ ಸೌಂದರ್ಯ: ಬೇಸಿಗೆಯಲ್ಲಿ ದೇಹ ನಿರ್ಜಲೀಕರಣ ಆಗುವ ಸಮಸ್ಯೆ ಸಹಜವಾಗಿದೆ. ಏಕೆಂದರೆ ಈ ಸಮಯದಲ್ಲಿ ಅತಿಯಾದ ಬೆವರುವಿಕೆ, ಬಿಸಿಲು, ಇರುತ್ತದೆ. ಹೀಗಾಗಿ ಸುಸ್ತು ಹೆಚ್ಚಾಗುತ್ತದೆ. ನಿಯಮಿತವಾಗಿ ತುಪ್ಪವನ್ನು ಸೇವಿಸುವುದರಿಂದ ಈ ನಿರ್ಜಲೀಕರಣದ ಸಮಸ್ಯೆಯನ್ನು ತಪ್ಪಿಸಬಹುದು.
ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು: ದೇಹದಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಂಡಾಗ ರೋಗಗಳು ನಮ್ಮನ್ನು ತಮ್ಮ ಹಿಡಿತಕ್ಕೆ ಎಳೆದುಕೊಂಡು ಬಿಡುತ್ತವೆ. ತುಪ್ಪದಲ್ಲಿ ಇರುವ ಗುಣಲಕ್ಷಣಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಆಹಾರ ಪದಾರ್ಥದಲ್ಲಿ ಒಳ್ಳೆಯ ಗುಣಮಟ್ಟದ ತುಪ್ಪ ಬಳಸುವುದರಿಂದ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
Romantic Destinations: ಮಳೆಗಾಲದಲ್ಲಿ ನವ ಜೋಡಿಗಳು ಪ್ರವಾಸಕ್ಕೆ ಹೋಗುವ ಪ್ಲಾನ್ ಇದೀಯಾ? ಇಲ್ಲಿದೆ ಸುಂದರತಾಣಗಳು
ಹೊಟ್ಟೆಯ ಆರೋಗ್ಯ: ತುಪ್ಪ ಸೇವನೆಯಿಂದ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಉಳಿಯುತ್ತದೆ. ಈ ಬಗ್ಗೆ ಆಯುರ್ವೇದದಲ್ಲಿ ಕೂಡ ತಿಳಿಸಲಾಗಿದೆ. ಬೇಸಿಗೆಯಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಪ್ರತಿದಿನ ತುಪ್ಪದಿಂದ ಮಾಡಿದ ಪದಾರ್ಥಗಳನ್ನು ಸೇವನೆ ಮಾಡಿ.