ಮುಂಬೈ: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದ ಕೈಗಾರಿಕೋದ್ಯಮಿ ಗೌತಮ್ ಅದಾನಿ(Gautam Adani) ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ(Uddhav Thackeray) ಅವರನ್ನು ಬುಧವಾರ ಮುಂಬೈನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಉದ್ದವ್​ ಠಾಕ್ರೆ ನಿವಾಸ ಮಾತೋಶ್ರೀಗೆ ಭೇಟಿ ನೀಡಿದ ಅದಾನಿ ಮಾತುಕತೆ ನಡೆಸಿದ್ದಾರೆ. ಆದ್ರೆ, ಯಾವುದರ ಬಗ್ಗೆ ಚರ್ಚೆ ನಡೆದಿದೆ ಎಂಬುದನ್ನು ಮೂಲಗಳು ಬಹಿರಂಗಪಡಿಸಿಲ್ಲ.

ಇನ್ನೂ, ಉದ್ದವ್​ ಠಾಕ್ರೆ ಭೇಟಿ ಮಾಡಿದ ಬಳಿಕ ಅದಾನಿ ಅವರನ್ನು ಬಿಜೆಪಿಯ ಮುಂಬೈ ಅಧ್ಯಕ್ಷ ಆಶಿಶ್ ಶೆಲಾರ್​ ಭೇಟಿ ಮಾಡಿ ಚೆರ್ಚೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿವೆ.

ಶಿವಸೇನೆಯ ಹಿರಿಯ ನಾಯಕ ಏಕನಾಥ್ ಶಿಂಧೆ ಅವರು ತಮ್ಮ ನಾಯಕತ್ವದ ವಿರುದ್ಧ ದಂಗೆ ಎದ್ದ ನಂತರ ಮತ್ತು ಜೂನ್‌ನಲ್ಲಿ ಪಕ್ಷದ 39 ಶಾಸಕರೊಂದಿಗೆ ದೂರ ಸರಿದ ನಂತರ ಉದ್ದವ್​ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು.

ವೇಗವಾಗಿ ಬಂದು ಆಟೋ ರಿಕ್ಷಾಗಳಿಗೆ ಗುದ್ದಿದ ಕಾರು, ಹಲವರಿಗೆ ಗಾಯ… ಭಯಾನಕ ದೃಶ್ಯ ವೈರಲ್‌

BIGG NEWS : ವಿಪಕ್ಷಗಳ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ `ಮತಾಂತರ ನಿಷೇಧ ಮಸೂದೆ’ ಅಂಗೀಕಾರ

Good News : ರಾಜ್ಯ ಸರ್ಕಾರದಿಂದ ಬಡಜನತೆಗೆ ಮತ್ತೊಂದು ಸಿಹಿಸುದ್ದಿ : 72 ಗಂಟೆಯೊಳಗೆ ಮನೆ ಬಾಗಿಲಿಗೆ ಬರಲಿದೆ ಪಿಂಚಣಿ!

Share.
Exit mobile version