ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶನಗರದಲ್ಲಿ ಅಂಗನವಾಡಿ ಮಕ್ಕಳಿಗೋಸ್ಕರ ಕಳೆದ ಜನವರಿ 30 ನೇ ತಾರೀಕಿನಿಂದ ಗೌರಿ ನಾಯ್ಕ ಅವರು ಅಂಗನವಾಡಿಯ ಹಿಂಭಾಗದ ಜಾಗದಲ್ಲಿ ಯಾರ ಸಹಾಯವನ್ನೂ ಪಡೆಯದೇ ಬಾವಿ ತೋಡುತಿದ್ದಾರೆ. ಇವರ ಏಕಾಂಗಿ ಪ್ರಯತ್ನದಿಂದ ಇದೀಗ 45 ಅಡಿ ಯಲ್ಲಿ ನೀರು ಕಂಡು ಗೌರಿ ನಾಯಕ್ ಭಾವುಕರಾಗಿದ್ದಾರೆ.

200ಕ್ಕೂ ಹೆಚ್ಚು ಬಾರಿ ಕೋವಿಡ್-19 ಲಸಿಕೆ ಡೋಸ್ ತೆಗೆದುಕೊಂಡ ವ್ಯಕ್ತಿ

ಹೌದು ಬೇಸಿಗೆಯ ಹಿನ್ನೆಲೆಯಲ್ಲಿ ಗೌರಿ ನಾಯಕ್ ಕಳೆದ ಜನವರಿ 30ರಂದು ಅಂಗನವಾಡಿ ಮಕ್ಕಳಿಗೋಸ್ಕರ ಬಾವಿ ತೋಡಲು ಆರಂಭಿಸಿದ್ದರು. ಇದೀಗ ಏಕಾಂಗಿಯಾಗಿ ಭಾವಿತೋಡಿ ಕೊನೆಗೂ ನೀರು ತರಿಸಿದ ಗೌರಿ ನಾಯಕ್ 45 ಅಡಿ ಆಳದಲ್ಲಿ ನೀರು ಕಂಡು ಬಾವುಕರಾಗಿದ್ದಾರೆ. ಗಣೇಶನಗರದಲ್ಲಿ ಅಂಗನವಾಡಿ ಮಕ್ಕಳಿಗಾಗಿ ಗೌರಿ ಬಾವಿ ತೋಡಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶನಗರದಲ್ಲಿ ಅಂಗನವಾಡಿ ಮಕ್ಕಳಿಗೆ ಎಂದು ಗೌರಿ ಬಾವಿ ತೋಡಿದ್ದಾರೆ.

ರಾಮಮಂದಿರ ಉದ್ಘಾಟನೆ ವೇಳೆ ವೆಬ್‌ಸೈಟ್ ಹ್ಯಾಕ್‌ ಮಾಡಲು ಮುಂದಾಗಿದ್ದ ಪಾಕ್, ಚೀನಿ ಹ್ಯಾಕರ್‌ಗಳು!

ಜನವರಿ 30 ರಿಂದ ಗೌರಿ ನಾಯಕ್ ಮಕ್ಕಳಿಗಾಗಿ ಬಾವಿ ತೋಡುತ್ತಿದ್ದರು. ಇ ವೇಳೆ ಪರವಾನಿಗೆ ಪತ್ರ ಇಲ್ಲವೆಂದು ಅಧಿಕಾರಿಗಳು ಇದೇ ವೇಳೆ ಗೌರಿಗೆ ಬಾವಿ ತೋಡಲು ಅಡ್ಡಿಪಡಿಸಿದ್ದರು. ಅನುಮತಿ ಪತ್ರ ಇಲ್ಲವೆಂದು ಅಧಿಕಾರಿಗಳು ಹಲಗೆ ಹಾಕಿ ಬಾವಿಯನ್ನು ಮುಚ್ಚಿದ್ದರು. ಬಳಿಕ ಉತ್ತರ ಕನ್ನಡ ಜಿಲ್ಲಾಧಿಕಾರಿ ಬಾವಿ ತೊಡಲು ಗೌರಿಗೆ ಅನುಮತಿ ನೀಡಿದ್ದರು. ಅದರ ಪ್ರತಿಫಲವಾಗಿ ಇಂದು 45 ಅಡಿ ಆಳದಲ್ಲಿ ನೀರು ಬಂದಿದ್ದು ಇದನ್ನು ಕಂಡು ಗೌರಿ ಭಾವುಕರಾಗಿದ್ದಾರೆ. ಒಂದು ರೀತಿಯಲ್ಲಿ ಭಾಗೀರಥಿ ಎಂದು ಕರೆದರೂ ತಪ್ಪಾಗಲಿಕ್ಕಿಲ್ಲ.

BREAKING : ‘ಪ್ರಚೋದನಕಾರಿ’ ಭಾಷಣ ಆರೋಪ : ಬಿಜೆಪಿ ಶಾಸಕ ‘ಬಸನಗೌಡ ಪಾಟೀಲ್ ಯತ್ನಾಳ’ ವಿರುದ್ಧ ದೂರು ದಾಖಲು

Share.
Exit mobile version