ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಲಿಂಡರ್‌ಗಾಗಿ ಸಾರ್ವಜನಿಕರು ಹಾಗೂ ಮಹಿಳೆಯರು ಕಳೆದ ಎರಡು ಹಗಲು ಮತ್ತು ಎರಡು ರಾತ್ರಿಗಳಿಂದ ಗ್ಯಾಸ್ ಏಜೆನ್ಸಿ ಮುಂದೆ ಸಾಲುಗಟ್ಟಿ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ. ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ಗ್ಯಾಸ್ ಸರಬರಾಜು ಸಂಪೂರ್ಣ ವ್ಯತ್ಯಯಗೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಚಾಪೆ, ದಿಂಬು ಹಿಡಿದು ಫುಟ್‌ಪಾತ್‌ನಲ್ಲೇ ವಾಸ್ತವ್ಯ! ಗ್ಯಾಸ್ ಸಿಲಿಂಡರ್ ಪಡೆಯಲು ಗ್ರಾಮಸ್ಥರು ಪಡುತ್ತಿರುವ ಪಾಡು ನಿಜಕ್ಕೂ ಮರುಕ ಹುಟ್ಟಿಸುವಂತಿದೆ. … Continue reading ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು