ಜೈಪುರ: ರಾಜಸ್ಥಾನದ ಭರತ್ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ 1.5 ಲಕ್ಷ ರೂ.ಗಳ ವರದಕ್ಷಿಣೆ ನೀಡಲು ವಿಫಲವಾದ ಕಾರಣ ಆಕೆಯ ಮೇಲೆ ತನ್ನ ಸಂಬಂಧಿಕರಿಂದಲೇ ಹೆಂಡತಿಯ ಮೇಲೆ ಗ್ಯಾಂಗ್ರೇಪ್ ಮಾಡಿಸಿ, ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿರುವ ಘಟನೆ ನಡೆದಿದೆ.
ಸಂತ್ರಸ್ತೆ ಪತಿ ಮತ್ತು ಅವನ ಇಬ್ಬರು ಸಂಬಂಧಿಕರ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣವನ್ನು ದಾಖಲಿಸಿದ್ದಾರೆ. ಭರತ್ಪುರದ ಕಮಾನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ದೌಲತ್ ಸಾಹು ಹೇಳುವ ಪ್ರಕಾರ, “ಮಹಿಳೆಯೊಬ್ಬಳು ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದಾಳೆ, ಇದರಲ್ಲಿ ತನ್ನ ಪತಿ ಮತ್ತು ಇಬ್ಬರು ಸಂಬಂಧಿಕರು ಭಾಗಿಯಾಗಿದ್ದಾರೆ. ಅಶ್ಲೀಲ ವೀಡಿಯೊವನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯಕ್ಕೆ, ಅದು ಇನ್ನೂ ದೃಢಪಟ್ಟಿಲ್ಲ” ಎಂದು ಹೇಳಿದ್ದಾರೆ. ಸಂತ್ರಸ್ತೆ, “ನನ್ನ ಅತ್ತೆ-ಮಾವಂದಿರು ವರದಕ್ಷಿಣೆಯ ಬಗ್ಗೆ ನನಗೆ ಕಿರುಕುಳ ನೀಡುತ್ತಿದ್ದರು. ಅವರಿಗೆ ವರದಕ್ಷಿಣೆ ನೀಡದಿದ್ದಾಗ, ಅವರು ತಮ್ಮ ಸಂಬಂಧಿಕರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುವಂತೆ ಮಾಡಿದರು, ಘಟನೆಯನ್ನು ಚಿತ್ರೀಕರಿಸಿದರು ಮತ್ತು ಆ ವೀಡಿಯೊಗಳನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದರು. ಆರೋಪಿಗಳಲ್ಲಿ ಒಬ್ಬನು ಐದು ದಿನಗಳ ಹಿಂದೆ ನನ್ನನ್ನು ಕಮಾನ್ ಗೆ ಕರೆತಂದು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಅಂಥ ಹೇಳಿದ್ದಾರೆ.
BREAKING NEWS : ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ : 24 ಗಂಟೆಯಲ್ಲಿ 3,688 ಕೇಸ್ ಪತ್ತೆ
ಚೀನಾದಲ್ಲಿ ಹೊಸದಾಗಿ 1,410 ಕೋವಿಡ್ ಪ್ರಕರಣಗಳು ದೃಢ : 47 ಮಂದಿ ಸಾವು
BREAKING NEWS : ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ : 24 ಗಂಟೆಯಲ್ಲಿ 3,688 ಕೇಸ್ ಪತ್ತೆ