ಸುಭಾಷಿತ :

Thursday, April 2 , 2020 11:53 PM

ಗಣಪತಿ ಉತ್ಸವದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ


Friday, August 30th, 2019 3:32 pm

ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿದ್ದು, ಗಣಪತಿ ಉತ್ಸವಕ್ಕೆ ಯಾವುದೇ ರೀತಿಯ ಹೊಸ ನಿಯಮ ರೂಪಿಸಿಲ್ಲ. ನಗರ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ ಗೌರಿ-ಗಣೇಶ ಮತ್ತು ಮೊಹರಂ ಆಚರಣೆಗೆ ತೊಂದರೆ ಉಂಟಾಗದಂತೆ ಎಲ್ಲ ರೀತಿಯ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸುಳ್ಳುವದಂತಿಗಳಿಗೆ ಕಿವಿಗೊಡಬಾರದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ.

ಎಲ್ಲಿಯೂ ಗಣಪತಿ ಕೂರಿಸಲು ನಾವು ಅಡ್ಡಿಪಡಿಸಿಲ್ಲ. ಗಣೇಶ ಉತ್ಸವ ಮತ್ತು ಮೊಹರಂ ಏಕಕಾಲದಲ್ಲಿ ಬಂದಿದ್ದು, ಶಾಂತಿಯುತವಾಗಿ ಆಚರಣೆ ಮಾಡಬೇಕು. ಅತಿಯಾದ ನಿಯಮಗಳನ್ನು ವಿಧಿಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಆಂತ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ಡಿಜೆ, ಸೌಂಡ್ಸ್ ಸಿಸ್ಟಮ್ ಬಳಸಿಕೊಳ್ಳಲು ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳಿಗೆ ಅವಕಾಶ ಕೊಡುವಂತೆ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರಿಗೆ ಸಾರ್ವಜನಿಕರು ಮನವಿ ಪತ್ರ ನೀಡಿದ್ದಾರೆ. ಇದಕ್ಕೆ ಸಮ್ಮತಿಸಿರುವ ಮುಖ್ಯಮಂತ್ರಿ, ಪೊಲೀಸ್ ಕಮಿಷನರ್ ಮತ್ತು ಎಸ್​ಪಿಗಳಿಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions