ಕೇಂದ್ರದಿಂದ ಬೀದಿ ವ್ಯಾಪಾರಿಗಳಿಗೆ ʼಗುಡ್‌ ನ್ಯೂಸ್‌ʼ: ʼಆತ್ಮ ನಿರ್ಭರ್ʼ ನಿಧಿ ಯೋಜನೆಯಡಿ ಖಾತೆಗೆ ಬರುತ್ತೆ 10 ಸಾವಿರ..! – Kannada News Now


India

ಕೇಂದ್ರದಿಂದ ಬೀದಿ ವ್ಯಾಪಾರಿಗಳಿಗೆ ʼಗುಡ್‌ ನ್ಯೂಸ್‌ʼ: ʼಆತ್ಮ ನಿರ್ಭರ್ʼ ನಿಧಿ ಯೋಜನೆಯಡಿ ಖಾತೆಗೆ ಬರುತ್ತೆ 10 ಸಾವಿರ..!

ದಾವಣಗೆರೆ: ಕೇಂದ್ರ ಸರ್ಕಾರ ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿ ಕಿರು ಸಾಲ ಮತ್ತು ಬಡ್ಡಿ ಸಹಾಯ ಧನ ನೀಡಲು ಮುಂದಾಗಿದ್ದು, ಆಸಕ್ತ ಬೀದಿ ವ್ಯಾಪಾರಸ್ಥರು ಅರ್ಜಿ ಸಲ್ಲಿಸಬಹುದು.

ಕೋವಿಡ್-19 ಲಾಕ್‍ಡೌನ್ ಅವಧಿ ಬೀದಿ ವ್ಯಾಪಾರಸ್ಥರ ಜೀವನದ ಮೇಲೆ ಅಪಾರ ಪರಿಣಾಮ ಬೀರಿದೆ. ಇದ್ರಿಂದ ಅವ್ರ ಜೀವನ ವ್ಯವಸ್ಥೆಯೇ ಬದಲಾಗಿ ಹೋಗಿದೆ. ಹಾಗಾಗಿ ಬೀದಿ ವ್ಯಾಪಾರಿಗಳ ಜೀವನೋಪಾಯ ಅಭಿವೃದ್ಧಿಗಾಗಿ ಹಾಗೂ ಅವರ ವ್ಯವಹಾರವನ್ನು ಪುನರಾರಂಭಿಸಲು ಬಂಡವಾಳದ ಅವಶ್ಯಕತೆ ಇದೆ. ಅದ್ರಂತೆ, ಬೀದಿ ವ್ಯಾಪಾರಸ್ಥರಿಗೆ ಆತ್ಮ ನಿರ್ಭರ್ ನಿಧಿಯ ಯೋಜನೆಯನ್ನ ಅನುಷ್ಟಾನಗೊಳಿಸುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯಕ್ಕೆ ಸರ್ಕಾರ ಅದೇಶ ಹೊರಡಿಸಲಾಗಿದೆ.

ಇದ್ರ ಮತ್ತೊಂದು ವಿಶೇಷತೆ ಏನೇಂದ್ರೆ ಅರ್ಜಿ ಸಲ್ಲಿಸಿದ ಕೇವಲ 10 ದಿನಗಳ ಒಳಗಾಗಿ ಸಾಲ ಮತ್ತು ಸಹಾಯಧನ ದೊರಯಲಿದೆ. ಹಾಗಾಗಿ ಬೀದಿ ಬದಿ ವ್ಯಾಪಾರಸ್ಥರು ತಕ್ಷಣ ಅರ್ಜಿ ಸಲ್ಲಿಸಿ, ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ. ಅದ್ರಂತೆ, ಆಸಕ್ತರು ಅಧಿಕೃತ ವೆಬ್‌ಸೈಟ್‌ https://pmsvanidhi.mohua.gov.in ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನು ಬೀದಿ ಬದಿ ವ್ಯಾಪಾರಸ್ಥರ ಕಾರ್ಡ್ ಹೊಂದಿರದವರು ಮಹಾನಗರಪಾಲಿಕೆಯಲ್ಲಿ ತೆರೆಯಲಾಗಿರುವ ಸಹಾಯ ಕೇಂದ್ರದ ಮೂಲಕ 24 ಗಂಟೆಯೊಳಗೆ ಕಾರ್ಡ್ ಪಡೆಯಬಹುದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.