ಬೆಂಗಳೂರು: “2025-26ನೇ ಶೈಕ್ಷಣಿಕ ~ ಸಾಲಿನಿಂದ ಅನ್ವಯವಾಗುವಂತೆ ಜೂನ್ ಒಂದನೇ ತಾರೀಕಿಗೆ 2025-26ನೇ ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶಿಸಿದೆ. ಆದೇಶವನ್ನು ಕಳೆದ ವರ್ಷವೇ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು, ಈಗ ಮತ್ತೆ ಪೋಷಕರ ಮಾಹಿತಿಗಾಗಿ ಮತ್ತೊಮ್ಮೆ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾದ್ರೇ ಆದೇಶದಲ್ಲಿ ಇರುವುದು ಏನು ಎನ್ನುವುದನ್ನು ನೋಡುದುವಾದ್ರೆ ಅದರ ವಿವರ ಈ ಕೆಳಕಂಡತಿದೆ.   

ವಹಿವಾಟು ಶುಲ್ಕ ವಿಧಿಸಿದರೆ ಶೇ.70ರಷ್ಟು ಬಳಕೆದಾರರು ಯುಪಿಐ ಬಳಸುವುದನ್ನು ನಿಲ್ಲಿಸುತ್ತಾರೆ: ಸಮೀಕ್ಷೆ

ಮಹಿಳಾ ವಿದ್ಯಾರ್ಥಿಗಳೇ ಗಮನಿಸಿ: ವಾರ್ಷಿಕ 25,000 ವರೆಗೆ ಸಿಗಲಿರುವೆ ಸ್ಕಾಲರ್‌ಶಿಪ್‌ಗೆ ಈಗಲೇ ಅರ್ಜಿ ಸಲ್ಲಿಸಿ! ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ‘ಗುಣಮಟ್ಟದ ಶಿಕ್ಷಣ’ ಸಿಗಬೇಕು: ಸಿಎಂ ಸಿದ್ದರಾಮಯ್ಯ

ಆರ್ ಟಿ ಇ ಕಾಯಿದ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ರಂತ 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿ ಪಡಿಸಿ ಉಲ್ಲೇಖ-2 ರನ್ವಯ ತಿದ್ದುಪಡಿ ಆದೇಶ ಹೊರಡಿಸಿರುತ್ತದೆ. ಅದರಂತೆ ಕ್ರಮವಹಿಸಲು ಇಲಾಖೆಯ ಎಲ್ಲಾ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ: ಇಪಿ 260 ಪಿಜಿಸಿ 2021, ದಿನಾಂಕ 26.07.2022ರ ಆದೇಶ ಭಾಗದ 3ನೇ ಸಾಲಿನಲ್ಲಿ “ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ” ಆದೇಶಿಸಿದೆ ಎಂಬುದನ್ನು “2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶಿಸಿದ ಎಂದು ತಿದ್ದಿ ಓದಿಕೊಳ್ಳತಕ್ಕದ್ದು. ಉಳಿದಂತೆ ಸರ್ಕಾರದ ಆದೇಶ ಸಂಖ್ಯೆ: ಇಪಿ 260 ಪಿಜಿಸಿ 2021, ದಿನಾಂಕ 26.07.2022ರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಅಂತ ಇದೇ ವೇಳೆ ತಿಳಿಸಿದೆ.  ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ದಿನಾಂಕ:18.01.2017ರ ಜ್ಞಾಪನವನ್ನು ಮಾರ್ಪಡಿಸಿ ಶೈಕ್ಷಣಿಕ ವರ್ಷ 2018-19ನೇ ಸಾಲಿನಿಂದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ 1ನೇ ತರಗತಿಗೆ ನೇರವಾಗಿ ದಾಖಲಾಗುವ ಮಗುವು ಸಂಬಂಧಿಸಿದ ಶೈಕ್ಷಣಿಕ ವರ್ಷದ ಜೂನ್ 1 ರಂದು 5 ವರ್ಷ, 10 ತಿಂಗಳು ಪೂರ್ಣಗೊಂಡಿರಬೇಕೆಂದು ಮೇಲೆ ಓದಲಾದ (3)ರ ಜ್ಞಾಪನದಲ್ಲಿ ನಿಗಧಿಪಡಿಸಲಾಗಿದೆ.

2009ರಲ್ಲಿ ಆರ್.ಟಿ.ಇ. ಕಾಯ್ದೆ ಮತ್ತು 2012 ರಲ್ಲಿ ಕಡ್ಡಾಯ ಶಿಕ್ಷಣ ನಿಯಮಗಳು ಜಾರಿಗೆ ಬಂದಿದ್ದು. ಇವುಗಳು ಕರ್ನಾಟಕ ಶಿಕ್ಷಣ ಕಾಯ 1983 ಮತ್ತು ಅದರಡಿ ರಚಿತವಾದ ಎಲ್ಲಾ ನಿಯಮಗಳನ್ನು | ಆದೇಶಗಳನ್ನು ನಿರಸನಗೊಳಿಸುತ್ತದೆ (Overruled). ಆದ್ದರಿಂದ, ಆರ್.ಟಿ.ಇ. ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರಂತೆ ಪ್ರಾಥಮಿಕ ಶಾಲೆಗೆ ದಾಖಲಿಸಲು ಮಗುವಿನ ಕನಿಷ್ಠ ವಯಸ್ಸನ್ನು ನಿಗಧಿಪಡಿಸುವುದು ಅಗತ್ಯವಾಗಿರುತ್ತದ ಅಂತ ತಿಳಿಸಿದೆ.

Share.
Exit mobile version